ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನ ಹಂಚಿಕೆ: ಸಿಎಂ ಹಸ್ತಕ್ಷೇಪ – ಈಶ್ವರಪ್ಪ ಹೈಕಮ್ಯಾಂಡ್ ಗೆ ದೂರು

Team Newsnap
1 Min Read
Image source : google
  • ನನ್ನ ಗಮನಕ್ಕೆ ತಾರದೇ 1200 ಕೋಟಿ ರು ಅನುದಾನ ಹಂಚಿಕೆ
  • ಬಿಜೆಪಿ ಹೈಕಮಾಂಡ್ ಗೆ 2 ಪುಟದ ದೂರು ಸಲ್ಲಿಕೆ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸಿಎಂ ಬಿಎಸ್ ವೈ ವಿರುದ್ದವೇ ತೊಡೆ ತಟ್ಟಿದ್ದಾರೆ.

ಸಚಿವ ಈಶ್ವರಪ್ಪನವರ ಗಮನಕ್ಕೆ ಬಾರದೇ ಆರ್​ಡಿಪಿಆರ್ ಇಲಾಖೆಯ ಅನುದಾನವನ್ನು ಸಿಎಂ ಬಿ.ಎಸ್. ಯಡಿಯೂರಪ್ಪನವರು ಹಂಚಿದ್ದಾರೆ ಎಂದು ರಾಜ್ಯಪಾಲರೂ ಸೇರಿದಂತೆ ಕೇಂದ್ರದ ನಾಯಕರಿಗೆ ದೂರು ನೀಡಿದ್ದಾರೆ.

ಈಶ್ವರಪ್ಪ ದೂರಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಮಾಡಿದ ಆದೇಶವನ್ನು ತಡೆಹಿಡಿಯಿರಿ ಎಂದು ಈಶ್ವರಪ್ಪನವರಿಗೆ ಸಲಹೆ ನೀಡಿದ್ದಾರೆ.

ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮತ್ತು ಬಿಜೆಪಿ ಪ್ರಧಾನಿ ಕಾರ್ಯದರ್ಶಿ ಸಿಟಿ ರವಿ ಸಹ ಸಹ ಆದೇಶಕ್ಕೆ ಸಹಿ ಹಾಕಬಾರದೆಂದು ಆರ್​ಡಿಪಿಆರ್​ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇತ್ತ ಈಶ್ವರಪ್ಪ ಸೂಚನೆ ನೀಡದ ಹಿನ್ನೆಲೆ ಆರ್​ಡಿಪಿಆರ್​ ಪ್ರಧಾನ ಕಾರ್ಯದರ್ಶಿ ಎಲ್​.ಕೆ. ಅತೀಕ್​ ಅವರಿಗೆ ಸಿಎಂ ಬಿಎಸ್​ವೈ ತರಾಟೆ ತೆಗೆದುಕೊಂಡಿದ್ದಾರಂತೆ.

ಎಲ್​ಕೆ ಅತೀಕ್ ಅವರನ್ನು ಕಚೇರಿಗೆ ಕರೆಸಿದ ದಿಎಂ ನನ್ನ ಮಾತಿಗೆ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರಂತೆ. ಇದಕ್ಕೆ ಈಶ್ವರಪ್ಪ ಸಹಿ ಹಾಕುವುದು ಬೇಡವೆನ್ನುತ್ತಿದ್ದಾರೆಂದು ಸಿಎಂಗೆ ಎಲ್​ಕೆ ಅತೀಕ್ ಉತ್ತರ ನೀಡಿದ್ದಾರೆ ಎನ್ನುವ ಮಾಹಿತಿ ಇದೆ.

ಹೈಮಾಂಡ್ ಸೂಚನೆ ಮೇರೆಗೆ ಅನುದಾನ ಹಂಚಿಕೆ ತಡೆ ಹಿಡಿದಿರುವ ಈಶ್ವರಪ್ಪ ಕಡತಕ್ಕೆ ಸಹಿ ಹಾಕದೇ ಸಿಎಂ ವಿರುದ್ಧ ತೊಡೆ ತಟ್ಟಿದ್ದಾರೆ ಎನ್ನಲಾಗಿದೆ.

ಅನುದಾನದ ಬಗ್ಗೆ ಕೆಲವು ಶಾಸಕರಿಂದ ಸಚಿವ ಈಶ್ವರಪ್ಪ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ನನ್ನ ಎಲ್ಲಾ ಹಕ್ಕನ್ನು ಸಿಎಂ ಕಿತ್ತುಕೊಳ್ಳುತ್ತಿದ್ದಾರೆ ಎಂದು ಈಶ್ವರಪ್ಪ ಬೇಸರ ಹೊರಹಾಕಿದ್ದಾರೆ.

ಅನುದಾನ ತಾರತಮ್ಯದ ಬಗ್ಗೆ ಸಿಎಂ ಬಳಿಯೇ ಮಾತನಾಡಿ ಎಂದು ಈಶ್ವರಪ್ಪ ಶಾಸಕರಿಗೆ ಹೇಳಿದ್ದಾರಂತೆ. ಈಶ್ವರಪ್ಪನವರ ಅನುದಾನದ ದೂರಿನ ಬಗ್ಗೆ ಅಮಿತ್​ ಶಾ, ಮೋದಿ ಪ್ರತಿಕ್ರಿಯೆ ನೀಡಿ, ನಿಮ್ಮ ದೂರ ಸ್ವೀಕೃತಿಯಾಗಿದೆ ಎಂದು ಸ್ವೀಕೃತ ಪತ್ರ ಕಳುಹಿಸಿದ್ದಾರೆಂದು ಹೇಳಲಾಗಿದೆ.

Share This Article
Leave a comment