ಕೊರೋನಾ ಆರ್ಭಟ : ಜೂನ್ ಅಂತ್ಯದತನಕ ಐಟಿ‌‌‌ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂ ವಿಸ್ತರಣೆ

Team Newsnap
1 Min Read

ಐಟಿ ಕಂಪನಿಗಳು ಸೇರಿದಂತೆ ಬಹುತೇಕ ಸಂಸ್ಥೆಗಳು ವರ್ಕ್ ಫ್ರಮ್ ಹೋಂನ್ನು ಜೂನ್ 31 ರ ತನಕ ಮುಂದುವರೆಸಿವೆ.

ಈಗ ಕೊರೊನಾ ಆರ್ಭಟ ಮತ್ತಷ್ಟು ಹೆಚ್ಚಾಗಿರುವ ಕಾರಣ ವರ್ಕ್ ಫ್ರಮ್ ಹೋಂನ್ನು ಮತ್ತೆ ಮೂರು ತಿಂಗಳಿಗೆ ವಿಸ್ತರಿಸಿವೆ. ಅಂದರೆ ಜೂನ್ ತನಕ ಮತ್ತೆ ವರ್ಕ್ ಫ್ರಮ್ ಹೋಂನಲ್ಲಿ ಮನ
ಯಿಂದಲೇ ಕೆಲಸ ಮಾಡುವಂತೆ ಐಟಿ ಕಂಪನಿಗಳು ತನ್ನ ಸಿಬ್ಬಂದಿಗಳಿಗೆ ಇ-ಮೇಲ್ ಕಳುಹಿಸಿವೆ.

ಕಂಪನಿ ಸೂಚಿಸುವ ಕೆಲಸ ಕಾರ್ಯಗಳು ಹಾಗೂ ನಿಗದಿತ ಪ್ರಾಜೆಕ್ಟ್ ಗಳನ್ನು ವರ್ಕ್ ಫ್ರಮ್ ಹೋಂನಲ್ಲಿ ಮುಗಿಸಿ ಎಂದು ಕಟ್ಟು ನಿಟ್ಟಿನ ಆದೇಶ ನೀಡಿವೆ.

ಕೊರೊನಾ ಮತ್ತೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಸರ್ಕಾರಿ ನೌಕರರಿಗೂ ಕೂಡ ವರ್ಕ್ಸ್ ಫ್ರಮ್ ಹೋಂ ವ್ಯವಸ್ಥೆ ಜಾರಿ ಮಾಡಿ. ಇಲ್ಲವೇ ಶೇಖಡಾ 50 ರಷ್ಟು ಸಿಬ್ಬಂದಿಗಳ ಹಾಜರಾತಿಯನ್ನು ಶಿಫ್ಟ್ ಮಾದರಿಯಲ್ಲಿ ಜಾರಿಗೆ ತನ್ನಿರಿ ಎಂದು ಸರ್ಕಾರಿ ನೌಕರರ ಸಂಘ ಕೂಡ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಮನವಿ ಮಾಡಿದೆ.

ವರ್ಕ್ ಫ್ರಮ್ ಹೋಂ ವ್ಯವಸ್ಥೆ ಬಂದ ಮೇಲೆ ಬಹಳಷ್ಟು ಜನರಿಗೆ ಕೆಲಸ ಸುಲಭ, ಕಡಿಮೆ ಅವಧಿಯ ಕೆಲಸ ಅಂತ ತಪ್ಪು ಕಲ್ಪನೆಯಲ್ಲಿದ್ದಾರೆ. ಆದರೆ ವಾಸ್ತುವವಾಗಿ ವರ್ಕ್ ಫ್ರಮ್ ಹೋಂನಲ್ಲಿ ಹೆಚ್ಚಿನ ಕೆಲಸದ ಒತ್ತಡವಿದೆ. ಕಂಪನಿಗೆ ಬಂದು ಕೆಲಸ ಮಾಡುವ ವೇಳೆ 8 ಗಂಟೆಗಳ ಕೆಲಸವಿತ್ತು. ಆದರೆ ಈಗ 12 ಗಂಟೆಗೂ ಮೀರಿ ಕೆಲಸ ಮಾಡಿಸುತ್ತಿದ್ದಾರೆ.

ಈಗಿರುವ ಸಿಬ್ಬಂದಿಗಳಿಂದಲೇ ಹೆಚ್ಚಿನ ಕೆಲಸ ಮಾಡಿಸುತ್ತಿರುವ ಕಾರಣ, ಐಟಿ ಕಂಪನಿಗಳು ಹೊಸದಾಗಿ ನೇಮಕಾತಿ ಕೂಡ ಮಾಡಿಕೊಳ್ಳುತ್ತಿಲ್ಲ. ಇದರಿಂದ ಪಾಸ್ ಔಟ್ ಆದ ಇಂಜಿನಿಯರಿಂಗ್ ಪದವಿಧರರು ಕೆಲಸವಿಲ್ಲದೆ ಪರದಾಡುವಂತಾಗಿದೆ.

Share This Article
Leave a comment