ಮದ್ದೂರಿನಲ್ಲಿ ಕೊಲೆ ಬೆದರಿಕೆ ಹಾಕಿದ RTI ಕಾರ್ಯಕರ್ತನ ಬಂಧನ

Team Newsnap
1 Min Read

ಪುರಸಭೆಯ ಕರ ವಸೂಲಿಗಾರನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ‌ ಹಾಕಿದ್ದಲ್ಲದೇ ಅಧಿಕಾರಿಗಳಿಗೂ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ RTI ಕಾರ್ಯಕರ್ತನೋರ್ವನನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ವಿವೇಕಾನಂದ ಬಡಾವಣೆಯ ಪುಟ್ಟಸ್ವಾಮಿಗೌಡನ ಪುತ್ರ ಪಿ.ಆನಂದ್ ಬಂಧಿತ ಆರ್.ಟಿ.ಐ ಕಾರ್ಯಕರ್ತ, ಈತನ ವಿರುದ್ಧ ಐಪಿಸಿ 341, 353, 504, 506 ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡ ನಂತರ ಆರೋಪಿ ಆನಂದ್ ನನ್ನು ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

ಆರೋಪಿ ಆನಂದ್ ಇತ್ತೀಚೆಗೆ ಪುರಸಭೆ ಆವರಣದಲ್ಲಿ ನಡೆದ ಬಹಿರಂಗ ಹರಾಜು ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಕೋರಿ ಪುರಸಭೆಗೆ ಅರ್ಜಿ ಸಲ್ಲಿಸಿದ್ದರು.

ಆನಂತರ ನಾನು ಕೇಳಿದಷ್ಟು ಹಣ ನೀಡಿದರೆ ಮಾಹಿತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಾಪಸ್ ಪಡೆದುಕೊಳ್ಳುವುದಾಗಿ ಹೇಳಿದ್ದ. ಈ ವೇಳೆ ನಾನು ಹಣ ನೀಡಲು ನಿರಾಕರಿಸಿದ ಪರಿಣಾಮ ಪದೇ ಪದೇ ಕಛೇರಿಗೆ ಬಂದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು.

ಕಳೆದ ಏ.21 ರಂದು ಸಂಜೆ 6.40ರ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಕ್ಕೆ ಬಂದು ಮತ್ತೆ ಹಣ ನೀಡುವಂತೆ ಒತ್ತಾಯಿಸಿದರು. ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ ಆಕ್ರೋಶಗೊಂಡ ಆರೋಪಿ ಆನಂದ್ ಅಶ್ಲೀಲವಾಗಿ ಬೈದು, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಶಿಂಷಾನದಿ ಪಾತ್ರದಲ್ಲಿ ಮರಳು ದಂಧೆ

ಈ ವೇಳೆ ಕಚೇರಿಯಲ್ಲಿದ್ದ ಮುಖ್ಯಾಧಿಕಾರಿ ಆರ್.ಅಶೋಕ್ ಹಾಗೂ ಸಹೋದ್ಯೋಗಿಗಳು ಸಮಾಧಾನ ಪಡಿಸಲು ಬಂದಾಗ ಅವರ ಮೇಲೂ ಸಹ ಆನಂದ್ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಧಮ್ಕಿ ಹಾಕಿದ್ದಾನೆ ಎಂದು ಕರ ವಸೂಲಿಗಾರ ಜಿ.ಎನ್.ಭರತ್ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

Share This Article
Leave a comment