ಶಿಂಷಾನದಿ ಪಾತ್ರದಲ್ಲಿ ಮರಳು ದಂಧೆ

Team Newsnap
3 Min Read
ಭಾರತೀನಗರ ಸಮೀಪದ ಕೊಕ್ಕರೆಬೆಳ್ಳೂರು ಮತ್ತು ತೊರೆಚಾಕನಹಳ್ಳಿ ಸಂಪರ್ಕ ಕಲ್ಪಿಸುವ ಸೇತುವೆಗೆ ಮರಳು ದಂಧೆಯಿಂದ ಭಾರಿ ಅಪಾಯ

ಚನ್ನಪಟ್ಟಣ ಮತ್ತು ಮದ್ದೂರು ಸೇತುವೆಗಳಿಗೆ ಭಾರಿ ಅಪಾಯ

ಭಾರತೀನಗರ: ಮದ್ದೂರು ತಾಲ್ಲೂಕು ಕೊಕ್ಕರೆಬೆಳ್ಳೂರು ಗ್ರಾಮ ಬಳಿ ಇರುವ ಶಿಂಷಾನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ಹೆಗ್ಗಿಲ್ಲದೆ ನಡೆಯುತ್ತಿದೆ. ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾ ಮತ್ತು ತಾಲ್ಲೂಕು ಆಡಳಿತಾಧಿಕಾರಿಗಳು ವಿಧಾನಸಭಾ ಚುನಾವಣೆಯಲ್ಲಿ ಕಾರ್ಯ ಒತ್ತಡದಲ್ಲಿ ಇರುವುದನ್ನು ಮನಗಂಡು ಸ್ಥಳಿಯರು ಶಿಂಷಾನದಿ ಪಾತ್ರದಲ್ಲಿ ಮರಳು ತೆಗೆಯುವುದಲ್ಲಿ ನಿರತರಾಗಿದ್ದಾರೆ.
 ಮರಳು ತೆಗೆಯದಂತೆ 144 ಸೆಕ್ಷನ್ ಜಾರಿಗೊಳಿಸಿದರೂ ಶಿಂಷಾನದಿ ಪ್ರದೇಶದಲ್ಲಿ ಹೆಗ್ಗಿಲ್ಲದೆ ಮರಳು ದಂಧೆ ಸಾಗುತ್ತಿದ್ದರೂ ಸ್ಥಳಿಯ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ಸಮೀಪದ ಇಗ್ಗಲೂರು, ಕೊಕ್ಕರೆಬೆಳ್ಳೂರು ಬಳಿಯ ಶಿಂಷಾ ನದಿಯಲ್ಲಿ ಅಕ್ರಮ ಮರಳುಗಾರಿಕೆಯಿಂದ ಹಲವು ತೊಂದರೆಗಳು ಕಾದಿವೆ. ಶಿಂಷಾ ನದಿಯ ಇಗ್ಗಲೂರು ಬ್ಯಾರೇಜ್ ಚನ್ನಪಟ್ಟಣ್ಣ ತಾಲ್ಲೂಕಿಗೆ ಹಾಗೂ ಕೊಕ್ಕರೆಬೆಳ್ಳೂರು- ತೊರೆಚಾಕನಹಳ್ಳಿ ಮದ್ದೂರು ತಾಲ್ಲೂಕು ವ್ಯಾಪ್ತಿಗೆ ಸೇರುತ್ತದೆ. ಅಕ್ರಮ ಮರಳು ತಡೆಗೆ ಮಂಡ್ಯ ಜಿಲ್ಲಾಡಳಿತ ಹಾಗೂ ರಾಮನಗರ ಜಿಲ್ಲಾಡಳಿತ ಕಂಡು ಕಣದಂತೆ ಮೌನವಹಿಸಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

ಸೇತುವೆ ಶಿಥಲ:

ಕೊಕ್ಕರೆಬೆಳ್ಳೂರು ಚಾಕನಹಳ್ಳಿಗೆ ಸಂಪರ್ಕವಿರುವ ಸೇತುವೆಯ ಕಂಬಗಳ ಸುತ್ತ ಪ್ರತಿದಿನ ಅಪಾರ ಪ್ರಮಾಣದಲ್ಲಿ ಮರಳು ತೆಗೆಯುತ್ತಿರುವುದರಿಂದ ಸೇತುವೆ ಶಿಥಲಗೊಳ್ಳುತ್ತಿವೆ. ಅಕ್ರಮವಾಗಿ ಹೀಗೆ ಮುಂದುವರೆದರೆ ಹಲವು ಗ್ರಾಮಗಳಿಗೆ ಇರುವ ಸಂಪರ್ಕ ಸೇತುವೆ ಕುಸಿದು ಬೀಳುವ ಆತಂಕವಿದೆ.

ಇಗ್ಗೂರು ಬಳಿ ಮರಳು ಸಂಗ್ರಹ: ಸಮೀಪದ ಹಾಗಲಹಳ್ಳಿ ಗ್ರಾಮವನ್ನು ಹೊಂದಿಕೊಂಡಂತಿರುವ ಇಗ್ಗಲೂರು ಬ್ಯಾರೇಜ್‍ನಲ್ಲಿರುವ ಹೆಗ್ಗಿಲ್ಲದೆ ಅಕ್ರಮ ಮರಳು ಗಾರಿಕೆ ರಾತ್ರಿ 11 ರಿಂದ ಬೆಳಿಗ್ಗೆ 6 ಗಂಟೆಯ ವರೆಗೆ ನಡೆಯುತ್ತಿದೆ. ಮರಳನ್ನು ಚನ್ನಪಟ್ಟಣ ತಾಲ್ಲೂಕಿನ ಇಗ್ಗಲೂರು ಗ್ರಾಮದ ಬಳಿ ಟ್ಯ್ರಾಕ್ಟರ್ ಮತ್ತ ಲಾರಿಯ ಮೂಲಕ ವಿವಿಧೆಡೆ ಸಾಗಾಣೆ ಮಾಡಲಾಗುತ್ತಿದೆ.

ಇಗ್ಗಲೂರು ಡ್ಯಾಮ್ ಸುತ್ತ-ಮುತ್ತ ಅಕ್ರಮ ಮರಳು ಗಾರಿಕೆ ಹೀಗೆ ಮುಂದುವರೆದರೆ ಡ್ಯಾಮ್‍ಗೆ  ಶಿಥಿಲವಾಗುವ ಸಂಭವಿದ್ದು ಇದನ್ನು ತಡೆಯಲು ಮಂಡ್ಯ ಹಾಗೂ ರಾಮನಗರ ಜಿಲ್ಲಾಡಳಿತ ಕೂಡಲೇ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೊಕ್ಕರೆಬೆಳ್ಳೂರು- ತೊರೆಚಾಕನಹಳ್ಳಿಯಲ್ಲಿ ಪ್ರತೀ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಮರಳು ತೆಗೆಯುವುದರಲ್ಲಿ ನಿರತರಾಗಿದ್ದಾರೆ. ಇದಕ್ಕೆ ಪೊಲೀಸ್ ಅಧಿಕಾರಿಗಳು ಶಾಮಿಲ್‍ಆಗಿದ್ದಾರೆಂದು ಕೆಲವರಿಂದ ಆರೋಪಗಳು ಕೇಳಿಬರುತ್ತಿವೆ. ತ್ರಿಕೋನ ಸ್ಪರ್ಧೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರ

ಮರಳು ದಂಧೆಯನ್ನು ಕಡಿವಾಣ ಹಾಕಲು ಮದ್ದೂರು ತಹಶೀಲ್ದಾರ್, ಉಪವಿಭಾಗಾಧಿಕಾರಿ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಳು ದಂಧೆಗೆ ಉಪಯೋಗಿಸುವ ಆಯುಧಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದರು. ಅದನ್ನು ಲೆಕ್ಕಿಸದೆ ಶಿಂಷಾನದಿ ಪಾತ್ರದಲ್ಲಿ ಮರಳು ದಂಧೆ ಹೆಗ್ಗಿಲ್ಲದೆ ನಡೆಯುತ್ತಿದೆ.
ದಂಧೆಯ ಲಾಭದ ಭಾಗವು ವಿ.ಎ, ಆರ್.ಐ, ಉಪತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೇರಿದಂತೆ ಬಹುತೇಕ ಪ್ರಭಾವಿ ವ್ಯಕ್ತಿಗಳಿಗೆ ಹಂಚಲಾಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿದೆ.

km doddi dam
ಭಾರತೀನಗರ ಸಮೀಪದ ಕೊಕ್ಕರೆಬೆಳ್ಳೂರು ಮತ್ತು ತೊರೆಚಾಕನಹಳ್ಳಿ ಸಂಪರ್ಕ ಕಲ್ಪಿಸುವ ಸೇತುವೆಗೆ ಮರಳು ದಂಧೆಯಿಂದ ಭಾರಿ ಅಪಾಯ

ರಸ್ತೆ ಅವ್ಯವಸ್ಥೆ: ಭಾರತೀನಗರ, ಕ್ಯಾತಘಟ್ಟ, ಅಜ್ಜಹಳ್ಳಿ, ಮಠದದೊಡ್ಡಿ, ನಗರಕೆರೆ, ಬನ್ನಳ್ಳಿ ಹೀಗೆ ಅನೇಕ ಗ್ರಾಮೀಣ ಪ್ರದೇಗಳಲ್ಲಿ ಹಾಕಿರುವ ಡಾಂಬರೀಕರಣ ರಸ್ತೆಗಳು ಮರಳು ದಂಧೆಯಿಂದಾಗಿ ಕಿತ್ತುಹೋಗುತ್ತಿವೆ. ಮತ್ತೆ ಮತ್ತೆ ರಸ್ತೆಗಳನ್ನು ಅಭಿವೃದ್ದಿ ಪಡಿಸುವುದರಲ್ಲೇ ಕಾಲಾರಣವಾಗುತ್ತಿದೆ.

ಏತನೀರಾವರಿಗೆ ಧಕ್ಕೆ: ಶಿಂಷಾನದಿಯ ವ್ಯಾಪ್ತಿಯಲ್ಲಿ 22 ಏತನೀರಾವರಿಗಳಿದ್ದು ಪಂಪ್‍ಸೆಟ್‍ಗಳ ಮೂಲಕ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ಪೂರೈಕೆ ಮಾಡಿಕೊಳ್ಳುವ ಮೂಲಕ ಉತ್ತಮ ಬೆಳೆ ಬೆಳೆಯಲಾಗುತ್ತಿದೆ. ಆದರೆ ಮರಳು ದಂಧೆಯಿಂದ ಏತನೀರಾವರಿಗೂ ದುರಂತ ಬಂದೊದಗಿದೆ.

ಇಗ್ಗಲೂರು ಡ್ಯಾಮ್‍ಗೆ ಅಪಾಯ:- ಹೆಚ್.ಡಿ.ದೇವೇಗೌಡರವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರೈತರ ಅನುಕೂಲಕ್ಕಾಗಿ ಇಗ್ಗಲೂರು ಬಳಿ ಡ್ಯಾಮ್ ನಿರ್ಮಿಸಿ ನೀರಾವರಿ ಯೋಜನೆಯನ್ನು ಕಲ್ಪಿಸಿದ್ದರು. ಈಗ ಮರಳು ದಂಧೆಯಿಂದಾಗಿ ಕೋಟ್ಯಾಂತರ ರೂ ಮೌಲ್ಯದ ಡ್ಯಾಮ್‍ಗೆ ಭಾರಿ ಅಪಾಯ ಬಂದೊದಗಿದೆ.
 ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ, ಮರಳು ಸಾಗಾಣಿಕೆ ನಿಷೇಧಾಜ್ಞೆ ಹೊರಡಿಸಿದ್ದರು. ಅಂದಿನಿಂದ ನಿಂದಿನವರೆವಿಗೂ ಮರಳು ದಂಧೆಮಾತ್ರ ನಿಂತಿಲ್ಲ.

ಪಕ್ಷಿಗಳ ವಲಸೆ ಇಳಿಮು

ಆಹಾರಕ್ಕಾಗಿ ಶಿಂಷಾನದಿ ಪಾತ್ರದಲ್ಲಿರುವ ಕೊಕ್ಕರೆಬೆಳ್ಳೂರಿಗೆ ವಿದೇಶದ ನಾನಾಬಗೆಯ ಕೊಕ್ಕರೆಗಳು ವಂಶಾಭಿವೃದ್ದಿಗಾಗಿ ವಲಸೆ ಬಂದು ಪಕ್ಷಿಧಾಮದಂತಾಗಿ, ಈ ವಿಶಿಷ್ಟ ಕೊಕ್ಕರೆಗಳು ಅಕ್ರಮ ಮರಳು ಸಾಗಾಣಿಕೆಯಿಂದ ಇಳಿಮುಖಗೊಳ್ಳುವಂತಾಗಿದೆ. ಅಲ್ಲದೆ ನದಿ ದಂಡೆಯಲ್ಲಿ ಮರಳು ತುಂಬುವವರ ಸಂಖ್ಯೆ ಹೆಚ್ಚಿರುವುದರಿಂದ ಈ ಪಕ್ಷಿಗಳು ಆಹಾರಕ್ಕೆ ನದಿಗಿಳಿಯಲು ಹೆದರುತ್ತಿವೆ. ಇದರಿಂದ ಪಕ್ಷಿಪ್ರೀಯರು ಆತಂಕಕ್ಕೊಳಗಾಗಿದ್ದಾರೆ.

ಮದ್ದೂರು ತಾಲ್ಲೂಕಿನಲ್ಲಿ ಅವ್ಯವತವಾಗಿ ನಡೆಯುತ್ತಿದ್ದ ಮರಳು ದಂಧೆಯನ್ನು ಈಗಾಗಲೇ ಕಡಿವಾಣ ಹಾಕಿ ಒಂದು ಹಂತಕ್ಕೆ ತರಲಾಗದೆ. ಶಿಂಷಾನದಿ ಪಾತ್ರದಲ್ಲಿ ಮರಳು ದಂಧೆ ನಡೆಯುತ್ತಿರುವಾಗ ನಮ್ಮ ಗಮನಕ್ಕೆ ಸಾರ್ವಜನಿಕರು ತಂದರೆ ಕೂಡಲೇ ಕಾರ್ಯಚರಣೆ ಕೈಗೊಳ್ಳುತ್ತೇನೆ

– ಟಿ.ಎನ್.ನರಸಿಂಹಮೂರ್ತಿ, ತಹಶೀಲ್ದಾರ್ ಮದ್ದೂರು.

ಮರಳು ದಂಧೆ ನಡೆಯುತ್ತಿರುವ ಸ್ಥಳಗಳಿಗೆ ದಾಳಿ ಮಾಡಿ ದಂಧೆಗೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡು ನ್ಯಾಯಲಕ್ಕೆ ಆರೋಪಿಗಳನ್ನು ಹಜರು ಪಡಿಸುತ್ತಿದ್ದೇವೆ

-ಆನಂದ್, ಸರ್ಕಲ್ ಇನ್ಸ್‍ಪೆಕ್ಟ್ ಕೆ.ಎಂ.ದೊಡ್ಡಿ  

ಸಿ.ಎಂ. ಮನೋಜ್

Share This Article
Leave a comment