DMK ಯಿಂದ ಅಣ್ಣಾಮಲೈಗೆ 100 ಕೋಟಿ ರು ಮಾನಹಾನಿ ನೋಟಿಸ್ !

Team Newsnap
1 Min Read

ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷವು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ವಿರುದ್ಧ 100 ಕೋಟಿರು ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸೋದಾಗಿ ಎಚ್ಚರಿಕೆ ನೀಡಿ ನೋಟಿಸ್ ನೀಡಿದೆ.

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ‘ದುಬೈ ಎಕ್ಸ್​ಪೋ’ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಬಂಧ ಯುಎಇ ಪ್ರವಾಸದಲ್ಲಿದ್ದಾರೆ.

ಸ್ಟಾಲಿನ್ ಅವರ ಈ ಪ್ರವಾಸದ ಬಗ್ಗೆ ಅಣ್ಣಾಮಲೈ ಸುಳ್ಳು ಪ್ರಚಾರ ಮಾಡಿದ್ದಾರೆ ಜೊತೆಗೆ ಮಾನಹಾನಿಕಾರಕ ಹೇಳಿಕೆಗಳನ್ನ ನೀಡಿದ್ದಾರೆ ಎಂದು ಡಿಎಂಕೆ ಆರೋಪಿಸಿದೆ.

ಅಣ್ಣಾಮಲೈ ವಾದವೇನು ?

ಮಾರ್ಚ್​ 24, 25 ರಂದು ಪ್ರತಿಭಟನೆ ಒಂದರಲ್ಲಿ ಮಾತನಾಡಿದ್ದ ಅಣ್ಣಾಮಲೈ, ಸ್ಟಾಲಿನ್ ಅವರ ದುಬೈ ಭೇಟಿ ವೈಯಕ್ತಿಕ ಉದ್ದೇಶ ಎಂದಿದ್ದರು ಎನ್ನಲಾಗಿದೆ.

ಅಣ್ಣಾಮಲೈ ಅವರ ಈ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿರುವ ಡಿಎಂಕೆ, ಸ್ಟಾಲಿನ್ ಬಳಿ ಬೇಷರತ್ ಕ್ಷಮೆ ಕೇಳಬೇಕು.

ಮುಂದಿನ 24 ಗಂಟೆಯೊಳಗೆ ಕ್ಷಮೆ ಕೇಳದಿದ್ದರೆ 100 ಕೋಟಿ ರೂಪಾಯಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 100 ಕೋಟಿ ರೂಪಾಯಿ ಪಾವತಿಸಬೇಕು. ಇಲ್ಲದಿದ್ರೆ ಕೇಸ್​ ದಾಖಲಿಸೋದಾಗಿ ಎಚ್ಚರಿಕೆಯನ್ನು ನೀಡಿದೆ.

ಸ್ಟಾಲಿನ್ ವಿರುದ್ಧ ನೀಡಿರುವ ಹೇಳಿಕೆ ಸುಳ್ಳು, ಕ್ಷುಲ್ಲಕ ಮತ್ತು ಖಂಡನೀಯ ಎಂದಿರುವ ಡಿಎಂಕೆ, ಅಣ್ಣಾಮಲೈಗೆ ನೋಟಿಸ್ ಕೂಡ ಜಾರಿ ಮಾಡಿದೆ. ಹಿರಿಯ ವಕೀಲ ಪಿ ವಿಲ್ಸನ್ ಮೂಲಕ ನೋಟಿಸ್ ನೀಡಲಾಗಿದೆ.

Share This Article
Leave a comment