EX CM, ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್ ಸಿಂಗ್​ಗೆ ಜೈಲು ಶಿಕ್ಷೆ

Team Newsnap
1 Min Read

ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ (EX CM) , ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್ ಸಿಂಗ್​ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

2011ರಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಭಾರತೀಯ ಜನತಾ ಯುವ ಮೋರ್ಚಾಪ್ರತಿಭಟನಾಕಾರರ ಜೊತೆಗೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಇಂಧೋರ್​ ವಿಶೇಷ ಕೋರ್ಟ್​ ಮಹತ್ವದ ಆದೇಶ ನೀಡಿದೆ.

ಈ ಪ್ರಕರಣದ ಎಲ್ಲಾ ಆರು ಆರೋಪಿಗಳು ತಪ್ಪಿತಸ್ಥರು ಎಂದಿರುವ ಕೋರ್ಟ್, ತಲಾ 5 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 325 (ಉದ್ದೇಶಪೂರ್ವಕವಾಗಿ ಮಾರಣಾಂತಿಕ ಗಾಯವನ್ನು ಮಾಡುವುದು) ಸೆಕ್ಷನ್ 109 (ಹಲ್ಲೆಗೆ ಕುಮ್ಮಕ್ಕು ನೀಡುವುದು) ಅಡಿಯಲ್ಲಿ ದಿಗ್ವಿಜಯ್ ಸಿಂಗ್ ಮತ್ತು ಮಾಜಿ ಉಜ್ಜಯಿನಿ ಸಂಸದ ಪ್ರೇಮಚಂದ್ ಗುಡ್ಡು ಅವರು ದೋಷಿಗಳು ಅಂತಾ ವಿಶೇಷ ನ್ಯಾಯಾಧೀಶ ಮುಖೇಶ್ ನಾಥ್ ತೀರ್ಪು ನೀಡಿದ್ದಾರೆ.

ಕಾಂಗ್ರೆಸ್ ಶಾಸಕರಾಗಿರುವ ಮಹೇಶ್ ಪರ್ಮಾರ್, ಮುಖೇಶ್ ಭಾಟಿ ಮತ್ತು ಹೇಮಂತ್ ಚೌಹಾಣ್ ಎಂಬುವವರನ್ನ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿದೆ. ಕೋರ್ಟ್​ ಆದೇಶ ಬೆನ್ನಲ್ಲೇ ದಿಗ್ವಿಜಯ್ ಸಿಂಗ್, ಶಿಕ್ಷೆಯನ್ನ ತಡೆ ಹಿಡಿದು ಜಾಮೀನು ನೀಡುವಂತೆ ಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ಕೋರ್ಟ್, 25 ಸಾವಿರ ರೂಪಾಯಿ ಬಾಂಡ್​ನೊಂದಿಗೆ ಜಾಮೀನು ಮಂಜೂರು ಮಾಡಿ ರಿಲೀಫ್ ನೀಡಿದೆ.

(EX CM)

Share This Article
Leave a comment