ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಕ್ಕು ಭದ್ಯತಾ ಸಮಿತಿ ಮುಂದೆ ಶಾಸಕ ಸಾ ರಾ ಮಹೇಶ್ ಗೆ ಅಗೌರವ ತೋರಿದ್ದಕ್ಕೆ ಕ್ಷಮೆ ಕೇಳಿದ್ದಾರೆ
ಕಳೆದ ಜನವರಿ 12 ರಂದು ನಡೆದ ಶಾಸಕ ಸಾ ರಾ ಮಹೇಶ್ ಅಧ್ಯಕ್ಷತೆಯಲ್ಲಿ ನಡೆದಿದ ಸಭೆಯಲ್ಲಿ ಅಂದು ಡಿಸಿ ಆಗಿದ್ದ ರೋಹಿಣಿ ಸಿಂಧೂರಿ ತಮಗೆ ಹಾಗೂ ತಮ್ಮ ಅಧ್ಯಕ್ಷತೆಯ ಕಾಗದ ಪತ್ರ ಸಮಿತಿಗೆ ಅಗೌರವ ಹಾಗೂ ಉದ್ದಟತನ ತೋರಿ ನಡೆದುಕೊಂಡಿರುವ ಬಗ್ಗೆ ವಿಧಾನ ಸಭೆ ಅಧಿವೇಶನದಲ್ಲಿ ಹಕ್ಕು ಚ್ಯುತಿ ಮಂಡನೆ ಮಾಡಿದ್ದರು.
ಈ ಕುರಿತಂತೆ ನಡೆದ ಹಕ್ಕು ಭಾದ್ಯತಾ ಸಮಿತಿ ಮುಂದೆ ರೋಹಿಣಿ ಸಿಂಧೂರಿ ಅಂದಿನ ಘಟನೆಯ ಬಗ್ಗೆ ಕ್ಷಮೆ ಕೇಳಿದ್ದಾರೆ .
ಇನ್ನು ಮುಂದೆ ಯಾವ ಶಾಸಕರು ಅಥವಾ ಯವುದೇ ಸಮಿತಿಯ
ಜೊತೆ ಉದ್ದಟತನದಿಂದ ನಡೆದುಕೊಳ್ಳುವುದಿಲ್ಲ. ಸರ್ಕಾರದ ಅದೇಶಗಳನ್ನು ಪಾಲಿಸುತ್ತೇನೆಂದು ರೋಹಿಣಿ ಹೇಳಿದ್ದಾರೆಂದು ಸಮಿತಿ ಮೂಲಗಳು ಹೇಳಿವೆ.
More Stories
ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶವೇ ಇಲ್ಲ: ಜಮೀರ್ ಅಹ್ಮದ್ ಖಾನ್
ಚಿನ್ನ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು; ಇತಿಹಾಸ ನಿರ್ಮಿಸಿದ ಆಟಗಾರ್ತಿ!
ಸಂಖ್ಯಾ ತಜ್ಞ ಆರ್ಯವರ್ಧನ್ ಕುಟುಂಬದ ಆಸ್ತಿ 5 ಸಾವಿರ ಕೋಟಿ ರು : ಬಿಗ್ ಬಾಸ್ ನಲ್ಲಿ ಬಹಿರಂಗ