ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಕಿರಿಕ್ -ಜಟಾಪಟಿ: 200 ಸೈನಿಕರನ್ನು ತಡೆದ ಭಾರತೀಯ ಸೈನ್ಯ

Team Newsnap
1 Min Read

ದೇಶದ ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಮತ್ತೆ ಕಿರಿಕ್ ಮಾಡಿ ಗಡಿಯೊಳಗೆ ನುಗ್ಗಲು ಮುಂದಾದ ಪರಿಣಾಮ ಭಾರತದ ಸೈನಿಕರು 200ಕ್ಕೂ ಹೆಚ್ಚು ಚೀನಿ ಸೈನಿಕರನ್ನು ಬಲವಂತವಾಗಿ ಹೊರ ದಬ್ಬಿದ್ದಾರೆ.

ಕಳೆದ ಬಾರಿ ಪೂರ್ವ ಲಡಾಕ್ ಗಡಿಯಲ್ಲಿ ಡ್ರ್ಯಾಗನ್ ಚೀನಾ ಮಾಡಿದ್ದ ಕಿರಿಕ್​​ನಿಂದಾಗಿ ಉಂಟಾಗಿದ್ದ ಉದ್ವಿಗ್ನತೆಯನ್ನು ಇತ್ತೀಚೆಗಷ್ಟೇ ಎರಡೂ ಸೇನೆಗಳು ಪರಸ್ಪರ ಒಪ್ಪಂದದಂತೆ ಹಿಂದೆ ಸರಿಯುವ ಮೂಲಕ ಬಗೆಹರಿದಿತ್ತು.

ಈಗ ಎಲ್ಲವೂ ತಣ್ಣಗಾಯ್ತು ಅನ್ನುವಷ್ಟರಲ್ಲಿ ಚೀನಾ ಇದೀಗ ಅರುಣಾಚಲ ಪ್ರದೇಶದಲ್ಲಿ ಕಿರಿಕ್ ಮಾಡಿದೆ ಎಂದು ವರದಿಗಳು ತಿಳಿಸಿವೆ.

ಅರುಣಾಚಲ ಪ್ರದೇಶದಲ್ಲಿರುವ ಲೈನ್ ಆಫ್​ ಆ್ಯಕ್ಚುವಲ್
ಕಂಟ್ರೋಲ್​​ ದಾಟಿ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸಿದ್ದರು. ಇದನ್ನು ಗಮನಿಸಿದ ಭಾರತೀಯ ಯೋಧರು, ಪಿಎಲ್​ಎ ಸೈನಿಕರನ್ನು ತಡೆದಿದ್ದಾರೆ. ಈ ವೇಳೆ ದೊಡ್ಡ ಮಟ್ಟದಲ್ಲಿಯೇ ಜಟಾಪಟಿ ನಡೆದಿದೆ ಎನ್ನಲಾಗಿದೆ.

ಕಿಡಿಕಾರಿದ ಭಾರತ

ಈ ಕುರಿತಂತೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಗ್ಚಿ, ಚೀನಾ ಮತ್ತೊಮ್ಮೆ ಪ್ರಚೋದನಾಕಾರಿಯಾಗಿ ನಡೆದುಕೊಂಡಿದೆ. ಗಡಿಯಲ್ಲಿ ಏಕಾಏಕಿಯಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡು ಶಾಂತಿ ಕದಡಲು ಪ್ರಯತ್ನಿಸಿದೆ ಎಂದು ಕಿಡಿಕಾರಿದ್ದಾರೆ.

Share This Article
Leave a comment