ಕಾರೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ 11.30 ರ ವೇಳೆಯಲ್ಲಿ ಮಳವಳ್ಳಿ ಸಮೀಪದ ಮಾರೇಹಳ್ಳಿ ಕಣಿಗಲ್ ಹಳ್ಳದ ಬಳಿ ಜರುಗಿದೆ.
ಮಳವಳ್ಳಿ – ಕೊಳ್ಳೇಗಾಲ ಹೆದ್ದಾರಿ ರಸ್ತೆಯ ಕಣಿಗಲ್ ಹಳ್ಳದ ಬಳಿ ಹೋಗುತ್ತಿದ್ದ ಆಟೋ ಗೆ ವೇಗವಾಗಿ ಬಂದ ಟಾಟಾ ಇಂಡಿಕಾ ಕಾರು ಡಿಕ್ಕಿ ಹೊಡೆದೆ ಆಗ ಆಟೋ ರಸ್ತೆ ಬದಿಯ ಹಳ್ಳದ ಪೊದೆಯೊಂದಕ್ಕೆ ತೂರಿಕೊಂಡಿದೆ.ಇದನ್ನು ಓದಿ –ಇಂಗ್ಲೆಂಡ್ PM ಸ್ಥಾನಕ್ಕೆ ಚುನಾವಣೆ: ಮುನ್ನಡೆ ಸಾಧಿಸಿದ ಸುಧಾ ಮೂರ್ತಿ ಅಳಿಯ ರಿಶಿ ಸುನಕ್
ಈ ವೇಳೆ ಆಟೋ ದಲ್ಲಿ ಇದ್ದ ಮೂವರು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಬೆಂಗಳೂರಿನ ಜೈಕರ್ನಾಟಕ ಜನಪರ ವೇದಿಕೆ ರಾಜ್ಯ ಕಾರ್ಯದರ್ಶಿ ರವಿಕುಮಾರ್ (50) ಬಾಸ್ಕರ್ (48)ಹಾಗೂ ಆಟೋ ಚಾಲಕ ಮದ್ದೂರು ತಾಲ್ಲೂಕು ಹುಲಿಗೆರೆ ಪುರ ಗ್ರಾಮದ ಶ್ರೀನಿವಾಸ್ (35)ಎಂಬುವರೇ ಮೃತಪಟ್ಟವರು
ಮೂಲತಃ ಕಣಿಕಹಳ್ಳಿ ಗ್ರಾಮದ ವರಾದ ರವಿಕುಮಾರ್ ಅವರ ಊರಿಗೆ ಈ ಮೂವರು ಆಟೋದಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆಯಿತು ಎನ್ನಲಾಗಿದೆ.
ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಕಾರು ಸಹ ಜಖಂ ಗೊಂಡಿದೆ. ಕಾರಿನಲ್ಲಿ ಇದ್ದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.ಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಇನ್ಸ್ ಪೆಕ್ಟರ್ ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳವಳ್ಳಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
- ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
- KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
- ವರದಕ್ಷಿಣೆ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆ – ಪತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
- ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
More Stories
ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು