ಕಿಕ್​ ಬಾಕ್ಸಿಂಗ್​ ಸ್ಪರ್ಧೆ: ತಲೆಗೆ ಬಿದ್ದ ಪೆಟ್ಟಿನಿಂದ ಮೈಸೂರಿನ ಯುವಕ ಸಾವು

Team Newsnap
1 Min Read
Kickboxing competition: A young man from Mysore died due to head injury ಕಿಕ್​ ಬಾಕ್ಸಿಂಗ್​ ಸ್ಪರ್ಧೆ: ತಲೆಗೆ ಬಿದ್ದ ಪೆಟ್ಟಿನಿಂದ ಮೈಸೂರಿನ ಯುವಕ ಸಾವು #Thenewsnap #Latestnews #Mysore #Youth #Kick_Boxing #Bengaluru #Death #ccompetition #Mandyanews

ಬೆಂಗಳೂರಿನ ಕೆಂಗೇರಿಯಲ್ಲಿ ಜುಲೈ 10 ರಂದು ನಡೆದ ಕಿಕ್ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಗಂಭೀರವಾಗಿ ಪಾಲ್ಗೊಂಡಿದ್ದ ಮೈಸೂರಿನ ಯುವಕ‌ ದುರಂತ ಸಾವು ಕಂಡಿದ್ದಾನೆ

ನಿಖಿಲ್ (24) ಮೃತ ದುರ್ದೈವಿ. ಬೆಂಗಳೂರಿನ ಕೆಂಗೇರಿಯಲ್ಲಿ K 1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಕಿಕ್ ಬಾಕ್ಸಿಂಗ್​ ಸ್ಪರ್ಧೆ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ನಿಖಿಲ್​ ಪಾಲ್ಗೊಂಡಿದ್ದರು.ಇದನ್ನು ಓದಿ –ಮಳವಳ್ಳಿ ಬಳಿ ಭೀಕರ ರಸ್ತೆ ಅಪಘಾತ : ಆಟೋಗೆ ಕಾರ್ ಡಿಕ್ಕಿ – ಮೂವರು ಧಾರುಣ ಸಾವು

ಕಿಕ್ ಬಾಕ್ಸಿಂಗ್​ನ ರಿಂಗ್‌ನಲ್ಲಿ ಸೆಣಸಾಡುತ್ತಿರುವಾಗ ಎದುರಾಳಿಯು ನಿಖಿಲ್​ ತಲೆಗೆ ಹೊಡೆದ ಏಟಿಗೆ ಬಾಕ್ಸಿಂಗ್ ರಿಂಗ್​ನಲ್ಲೇ ನಿಖಿಲ್​ ಕೆಳಗೆ ಬಿದ್ದವರು ಮೇಲಕ್ಕೆ ಏಳಲೇ ಇಲ್ಲ. ಕೂಡಲೇ ಅವರನ್ನು ಬೆಂಗಳೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಎರಡು ದಿನ ಕೋಮಾದಲ್ಲಿದ್ದ ನಿಖಿಲ್, ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದರು.

ನಿಖಿಲ್ ತಂದೆ ಬಾಕ್ಸರ್ ಆಗಿದ್ದರು. ಕಿಕ್ ಬಾಕ್ಸಿಂಗ್​ನಲ್ಲಿ ಹೆಸರು ಮಾಡಬೇಕೆಂದು ನಿಖಿಲ್​ ಕನಸು ಕಂಡಿದ್ದ. ಆದರೆ, ವಿಧಿಯಾಟದ ಮುಂದೆ ನಿಖಿಲ್​ರ ಜೀವವೇ ಕರಗಿದೆ.

ಕಿಕ್ ಬಾಕ್ಸಿಂಗ್​ನ ರಿಂಗ್​ನಲ್ಲಿ ನಿಖಿಲ್ ಕೆಳಗೆ ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ, ನಿಖಿಲ್​ರ ಬದುಕಿನ ಕೊನೇ ಕ್ಷಣ ನೋಡಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Share This Article
Leave a comment