KRS ನಿಂದ ಕಾವೇರಿ ನದಿಗೆ 1.50 ಲಕ್ಷ ಕ್ಯೂಸೆಕ್ ನೀರು ಬಿಡುವ ಸಾಧ್ಯತೆ – ಅಧಿಕಾರಿಗಳ ಮಾಹಿತಿ

Team Newsnap
1 Min Read
heavy rain in Kodagu: Inflow to KRS begins ಕೊಡಗಿನಲ್ಲಿ ವರುಣನ ಅಬ್ಬರ : ಕೆಆರ್ ಎಸ್ ಗೆ ಒಳ ಹರಿವು ಆರಂಭ

ಕೃಷ್ಣರಾಜಸಾಗರ ಆಣೆಕಟ್ಟೆಗೆ ಭಾರಿ ಪ್ರಮಾಣದಲ್ಲಿ ನೀರಿನ ಒಳಹರಿವು ಇರುವ ಹಿನ್ನೆಲೆಯಲ್ಲಿ ಕಾವೇರಿ ನದಿಗೆ 75 ಸಾವಿರ ಕ್ಯೂಸೆಕ್ ನಿಂದ 1ಲಕ್ಷ 50 ಸಾವಿರ ಕ್ಯೂಸೆಕ್ ನೀರು ಬಿಡುವ ಸೂಚನೆಯನ್ನು ನೀರಾವರಿ ಇಲಾಖೆ ಅಧಿಕಾರಿಗಳು ನೀಡಿದ್ದಾರೆ

WhatsApp Image 2022 07 14 at 10.42.48 AM

ಈಗ 1 ಟಿಎಂಸಿ ನೀರು ತುಂಬಿದ್ರೆ KRS ಡ್ಯಾಂ ಸಂಪೂರ್ಣ ಭರ್ತಿಯಾಗಲಿದೆ. ಇದನ್ನು ಓದಿ –ಕಿಕ್​ ಬಾಕ್ಸಿಂಗ್​ ಸ್ಪರ್ಧೆ: ತಲೆಗೆ ಬಿದ್ದ ಪೆಟ್ಟಿನಿಂದ ಮೈಸೂರಿನ ಯುವಕ ಸಾವು

ರಾಜ್ಯದಲ್ಲಿ ಕಳೆದ ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಕೆಆರ್‌ಎಸ್ ಡ್ಯಾಂ ಬಹುತೇಕ ಭರ್ತಿಯಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ 124.80 ಅಡಿ ಇದೆ. ಈಗಾಗಲೇ ಈ ಡ್ಯಾಂ 124.00 ಅಡಿ ಭರ್ತಿಯಾಗಿದೆ. ಡ್ಯಾಂಗೆ 65,635 ಕ್ಯೂಸೆಕ್ ಒಳಹರಿವು ಮತ್ತು 46,518 ಕ್ಯೂಸೆಕ್ ನೀರು ಹೊರಹರಿವು ಇದೆ.

49.452 ಟಿಎಂಸಿ ಸಾಂದ್ರತೆ ಇರುವ ಡ್ಯಾಂನಲ್ಲಿ 48.336 ಟಿಎಂಸಿ ಸಂಗ್ರಹವಾಗಿದೆ. ಇನ್ನು 1 ಟಿಎಂಸಿ ನೀರು ತುಂಬಿದ್ರೆ ಈ ಡ್ಯಾಂ ಸಂಪೂರ್ಣ ಭರ್ತಿಯಾಗುತ್ತೆ.

Share This Article
Leave a comment