ಡಿಜಿಟಲ್ ಆರೋಗ್ಯ ಕಾರ್ಡಿನಿಂದ ಆರೋಗ್ಯ ಸೇವೆಯಲ್ಲಿ ಕ್ರಾಂತಿಕಾರ ಬದಲಾವಣೆ: ಮೋದಿ ವಿಶ್ವಾಸ

Team Newsnap
1 Min Read
Modi to Hubballi on January 12: Preparations for the rush ಜನವರಿ 12ರಂದು ಹುಬ್ಬಳ್ಳಿಗೆಮೋದಿ: ಭರದ ಸಿದ್ಧತೆ

ಡಿಜಿಟಲ್ ಆರೋಗ್ಯ ಕಾರ್ಡ್ ವಿತರಣಾ ಯೋಜನೆಯು ದೇಶದಲ್ಲಿ ಆರೋಗ್ಯ ಸೇವೆ ನೀಡುವ ಕಾರ್ಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.


ಆರೋಗ್ಯ ಕುರಿತ ಸಮಗ್ರ ವಿವರಗಳಿರುವ ಡಿಜಿಟಲ್ ಆರೋಗ್ಯ ಕಾರ್ಡ್ ವಿತರಿಸುವ “ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್” ಯೋಜನೆಗೆ ನವದೆಹಲಿಯಲ್ಲಿ ಸೋಮವಾರ ಪ್ರಧಾನಿ ಚಾಲನೆ ನೀಡಿದರು.

ಆರೋಗ್ಯ ಸೇವಾ ಕ್ಷೇತ್ರವನ್ನು ಬಲಪಡಿಸುವ ಏಳು ವರ್ಷದ ಪ್ರಯತ್ನದಿಂದಾಗಿ ಇದು ಕಾರ್ಯರೂಪಕ್ಕೆ ಬಂದಿದೆ ಎಂದು ಹರ್ಷವ್ಯಕ್ತಪಡಿಸಿದರು.


ರೋಗಿಗಳ ರಕ್ಷಣೆ, ಉತ್ತಮ ಚಿಕಿತ್ಸೆ ನೀಡುವುದಕ್ಕೆ ಪೂರಕವಾಗಿ ವಿಶ್ವಾಸಾರ್ಹ ಮಾಹಿತಿಯನ್ನು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ನೀಡಲಿದೆ. ದೇಶದ ಬಡವರ್ಗದ ಜನರು ಈ ಯೋಜನೆಯಿಂದ ಹೆಚ್ಚಿನ ಲಾಭ ಪಡೆಯುವರೆಂದು ತಿಳಿಸಿದರು.


ಆರೋಗ್ಯ ಸೇವೆಯಲ್ಲಿ ತಂತ್ರಜ್ಞಾನದ ಮಹತ್ವವನ್ನು ಪ್ರಸ್ತಾಪಿಸಿದ ಮೋದಿ, ಕೊರೊನಾ ಸೋಂಕು ಹರಡುವುದನ್ನು ತಡೆಯುವಲ್ಲಿ ಆರೋಗ್ಯಸೇತು ಅಪ್ಲಿಕೇಷನ್ ಪಾತ್ರ ಬಹಳವಾಗಿದೆ. ಈವರೆಗೆ ಒಟ್ಟಾರೆ ೯೦ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ವಿವರಿಸಿದರು.


ಈ ಹೊಸ ಯೋಜನೆಯಿಂದ ವೈದ್ಯರು, ಆಸ್ಪತ್ರೆಗಳು ಹಾಗೂ ಆರೋಗ್ಯ ಸೇವೆ ಸಂಸ್ಥೆಗಳ ಮೇಲಿನ ಒತ್ತಡ ಇಳಿಯಲಿದೆ. ಒಂದು ಕ್ಲಿಕ್ ಮಾಡುವ ಮೂಲಕ ಜನರು ಆರೋಗ್ಯ ಸೇವೆ ಸೌಲಭ್ಯ ಪಡೆಯಲು ಸಹಾಯಕವಾಗಲಿದೆ. ನಾಗರಿಕರ ಸಮ್ಮತಿ ಆಧರಿಸಿ ಆರೋಗ್ಯ ದಾಖಲೆಗಳ ವಿನಿಮಯಕ್ಕೂ ಅವಕಾಶವಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.


ಈ ಯೋಜನೆಯ ಪೈಲಟ್ ಕಾರ್ಯಕ್ರಮವನ್ನು ಪ್ರಧಾನಿ 2020 ರ ಆಗಸ್ಟ್ 15 ರಂದು ಪ್ರಕಟಿಸಿದ್ದರು. ಇದನ್ನು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಆರೋಗ್ಯಯೋಜನೆಯ 3 ನೇ ವಾರ್ಷಿಕೋತ್ಸವ ವೇಳೆ ದೇಶವ್ಯಾಪಿ ವಿಸ್ತರಿಸಲಾಗುತ್ತದೆ ಎಂದು ವರದಿಯಾಗಿದೆ.

Share This Article
Leave a comment