ಭಾರತ್‌ಬಂದ್‌ ಷಢ್ಯಂತ್ರ-ರಾಜಕೀಯ ಪ್ರೇರಿತ – ಅರವಿಂದ್ ಅಭಿಮತ

Team Newsnap
2 Min Read

ಕೃಷಿ ಕಾಯ್ದೆ ವಿರೋಧಿಸಿ ನಡೆಸಿರುವ ಭಾರತ್‌ಬಂದ್ ಜನವಿರೋಧಿ ಮತ್ತು ರೈತವಿರೋಧಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.

ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿ ಜಿಲ್ಲಾ ಬಿಜೆಪಿಗರು ಆಯೋಜಿಸಿದ್ದ “ಭಾರತ್‌ಬಂದ್ ವಿರುದ್ದವಾಗಿ ದೇಶ್ಕಕಾಗಿ ಮೋದಿ-ಮೋದಿಗಾಗಿ ನಾವು ಘೋಷವಾಕ್ಯದೊಂದಿಗೆ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಮೋದಿಯ ವಿರುದ್ದ ನಡೆಯುವ ಯಾವುದೇ ಬಂದ್‌ಗೆ ನಮ್ಮ ಬೆಂಬಲವಿಲ್ಲ ಕಾರ್ಯಕ್ರಮ”ದಲ್ಲಿ ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಬಾದಾಮಿ ಹಾಲು ಮತ್ತು ಹೂ ನೀಡುವ ಮೂಲಕ ಅಭಿನಂದಿಸಿ ಅರವಿಂದ್ ಮಾತನಾಡಿದರು.

ನರೇಂದ್ರಮೋದಿಯ ಬಿಜೆಪಿ ಸರ್ಕಾರವು ರೈತಪರ ಸರ್ಕಾರ, ಕೃಷಿ ಕಾಯ್ದೆಯೂ ರೈತ ಸ್ನೇಹಿಯಾಗಿದ್ದು,ಅನ್ನದಾತರು ಭಯಪಡುವ ಅಗ್ಯವಿಲ್ಲ,ಕೇಂದ್ರ ಸರ್ಕಾರ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ-೨೦೨೦ ಜಾರಿಗೆ ತಂದು ರೈತರ ಪರವಾಗಿ ನಿಂತಿದೆ ಎಂದು ತಿಳಿಸಿದರು.

ರೈತರ ಹೆಸರು ಹೇಳಿಕೊಂಡು ತಮ್ಮ ಸ್ವಾರ್ಥಕ್ಕಾಗಿ ಸಾರ್ವಜನಿಕರಿಗೆ ವರ್ತಕರಿಗೆ ಮತ್ತು ದೇಶಾಭಿವೃದ್ದಿಗೆ ತೊಂದರೆ ಕೊಡಬಾರದು, ಮೋದಿ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ.ಆದ್ರೆ, ಕಾಂಗ್ರೆಸ್ ನಾಯಕರು ಮತ್ತು ಇತರೆ ಪಕ್ಷಗಳ ಮುಖಂಡರು, ಕಮ್ಯೂನಿಸ್ಟ್‌ ವಾದಿಗಳು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಸಲಿ ರೈತರು ಬಿಜೆಪಿ ಜೊತೆಗಿದ್ದಾರೆ. ನಕಲಿ ಅನೋದಕ್ಕಿಂತ ಬಿಳಿ ಬಟ್ಟೆ ಹಾಕಿ ರಾಜಕಾರಣ ಮಾಡುತ್ತಿರುವ ರೈತರು ನಿಜವಾದ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ರೈತರ ಶ್ರೀಮಂತ ಮಾಡಲು ಕೃಷಿ ಕಾಯ್ದೆ ತಂದಿದ್ದು, ಆದಾಯ ಹೆಚ್ಚುತ್ತದೆ, ದಲ್ಲಾಳಿಗಳ ಕಾಟ ತಪ್ಪುತದೆ, ರಾತಾಪಿಕುಟುಂಬ ಆರ್ಥಿಕವಾಗಿ ಸದೃಡಗೊಳ್ಳುತ್ತದೆ, ಕೃಷಿಭೂಮಿಗೆ ಭದ್ರತೆ ಸಿಗುತ್ತದೆ, ಯಾವಕಾರ್ಪೋರೇಟ್ ಕಂಪನಿಗಳು ಬಂದು ರೈತರನ್ನು ನಾಶಮಾಡುವುದಿಲ್ಲ ಎಂದು ತಿಳಿಸಿದರು.

ಭಾರತ್‌ ಬಂದ್ ಕೇವಲ ರಾಜಕೀಯ ಪ್ರೇರಿತವಾಗಿದೆ, ವಿರೋಧಪಕ್ಷಗಳ ಷಢ್ಯಂತ್ರಕ್ಕೆ ರೈತರು ಬಲಿಯಾಗುತ್ತಿದ್ದಾರೆ, ರೈತ ಸಾವಿನ ಮೂಲಕ ಜನರಲ್ಲಿ ಆತಂಕ ಸೃಷ್ಠಿಸುತ್ತಿದ್ದಾರೆ, ರೈತಚಳುವಳಿಗೆ ತನ್ನದೇ ಆದ ಐತಿಹ್ಯವಿದೆ, ರೈತರ ಮಕ್ಕಳು ನಾವು ಕೂಡ, ಅನ್ಯಾಯ, ವಂಚನೆಯಾಗಂತೆ ಕಾಯ್ದೆಗಳು ರೈತರ ಹಿತಕಾಯಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಹೆಪಿ ನಗರಾಧ್ಯಕ್ಷ ವಿವೇಕ್, ಹೊಸಹಳ್ಳಿ ಶಿವು, ಶಿವಕುಮಾರ್‌ಆರಾಧ್ಯ, ಸೋಮಶೇಖರ್, ಮಾದರಾಜೇ ಅರಸು, ಲಕ್ಷ್ಮಣ ಗೌಡ, ಎಂ.ಲೋಕೇಶ್ ಮತ್ತಿತರರಿದ್ದರು

Share This Article
Leave a comment