ಕಳೆದ 2-3 ವರ್ಷಗಳಲ್ಲಿ, ನನ್ನ ಅನೇಕ ಸಹೋದ್ಯೋಗಿಗಳು ಮತ್ತು ಸಮಕಾಲೀನರ ಫೋಟೋಗಳು ‘ನಿವೃತ್ತಿ’ ಶೀರ್ಷಿಕೆಯೊಂದಿಗೆ ವಾಟ್ಸ್ ಅಪ್ ಗ್ರೂಪ್‌ನಲ್ಲಿ ಪೋಸ್ಟ್ ಮಾಡುತ್ತಾರೆ , ಹಾಗಾದರೆ ಇದನ್ನು ನಿಜವಾಗಿಯೂ ನಿವೃತ್ತಿ ಎಂದು ಕರೆಯಬಹುದೇ? ವ್ಯಕ್ತಿಯು ನಿವೃತ್ತಿ ಹೊಂದುತ್ತಾನೆಯೇ? ಅದು ನಿಜ್ವಾಗ್ಲೂ ನಿಜವಾಗಿರಬಹುದೇ?
ನನ್ನ ಪ್ರಕಾರ, ನನ್ನ ಭಾವನೆ – ಇಲ್ಲ … ಅದು ನಿವೃತ್ತಿ ಅಲ್ಲ,
ಹಾಗಾಗಿ ನಾನು ಅವರಿಗೆ ಪ್ರತಿಕ್ರಿಯೆ ಮೂಲಕ ಹಾರೈಸುತ್ತೇನೆ – “ಸ್ನೇಹಿತರೇ, ನಿಮ್ಮ ಎರಡನೇ ಇನ್ನಿಂಗ್ಸ್‌ಗೆ ಆಲ್ ದಿ ಬೆಸ್ಟ್ !!” ಎಂದು.
ನಾನು ಕೆನಡಾಕ್ಕೆ ಬರುತ್ತಿದ್ದಾಗ ಇಪ್ಪತೈದರ ಹರೆಯದ ಭಾರತೀಯ ಯುವಕರೊಬ್ಬರ ಪರಿಚಯವಾಯಿತು.. ಹರಟೆ ಹೊಡೆಯುತ್ತಾ ಸುಮ್ಮನೆ ಕೇಳಿದೆ – “20 ವರ್ಷಗಳ ನಂತರ ನಿಮ್ಮನ್ನು ನೀವು ಎಲ್ಲಿ ಕಾಣುತ್ತೀರಿ?” ಎಂದೆ.
ನಾನು ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟವೇನಲ್ಲ ಆದರೆ ಈ ಪ್ರಶ್ನೆಯನ್ನು ಈ ದಿನಗಳಲ್ಲಿ ಬಹುತೇಕ ಎಲ್ಲೆಡೆ ಕೇಳಿ ಬರುತ್ತಿದೆ, ಅವರು ನಗುತ್ತಾ ಹೇಳಿದರು, -” ನಾನು ಬಹಳಷ್ಟು ಹಣವನ್ನು ಸಂಪಾದಿಸುತ್ತೇನೆ.. ಮುಂದೆ ನಾನು ನಿವೃತ್ತಿ ಹೊಂದಿ ರಜೆದಿನಗಳನ್ನು (holidays) ಐಷ್ಯಾರಾಮದಿಂದ ಆನಂದಿಸುತ್ತೇನೆ. Enjoying my retairment life ಎಂದು ಹೇಳಿದ.
ನನಗೇನು ಆಶ್ಚರ್ಯವೇನಿಸಲಿಲ್ಲ, ಏಕೆಂದರೆ ಇಂದಿನ ಪೀಳಿಗೆಯ ಉತ್ತರ ಸ್ವಲ್ಪ ಹೆಚ್ಚುಕಡಿಮೆ ವ್ಯತ್ಯಾಸದೊಂದಿಗೆ 45 /50 ವರ್ಷ ವಯಸ್ಸಿನವರೆಗೆ ಕೈತುಂಬಾ ದುಡಿದು ನಿವೃತ್ತಿಹೊಂದುವದು , ಮುಂದೆ ಐಷ್ಯಾರಾಮದಿಂದ ಆನಂದಿಸುವ ದಿನಗಳು ಕಳೆಯುವದು ಅಷ್ಟೇ… ಇವರ ಅಪೇಕ್ಷೆ.
ನಾನು ವ್ಯಾಂಕೋವರ್‌ನಲ್ಲಿ ಬಂದಿಳಿದ ಮೇಲೆ ಮುಂದೆ ಒಂದು ಗಂಟೆ ಕ್ಯಾಬ್ ರೈಡ್,
ಕ್ಯಾಬ್ ಕಾರು ದೊಡ್ಡದಾಗಿತ್ತು ಮತ್ತು ಶೆರಿಂಗ್ ಆಗಿತ್ತು, ನಮ್ಮೊಂದಿಗೆ ಕಾರಿನಲ್ಲಿದ್ದ ಶೆರಿಂಗ್ ಪ್ರಯಾಣಿಕರೊಬ್ಬರು ಸುಮಾರು 67-68 ವಯಸ್ಸಿನ ಕೆನಡಾದ ಹಿರಿಯರೊಬ್ಬರು ಭೇಟಿಯಾದರು .. ಅವರು ಇನ್ನೂ ಈಲ್ಲಿ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು … ನಂತರ ನನಗೆ ಕೆನಡಾದಲ್ಲಿ ನಿವೃತ್ತಿ ವಯಸ್ಸು 67 ಎಂದು ತಿಳಿದುಬಂತು.
ನಾನು ಹೇಳಿದೆ, “ನಮ್ಮ ಭಾರತದಲ್ಲಿ ನಾವು 60/62 ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತೇವೆ – ಅಂದರೆ ನಿವೃತ್ತಿ..”
ಅವರು ಹೇಳಿದರು – “ಹಾಗಾದರೆ ನೀವು ನಿವೃತ್ತಿಯ ನಂತರ ಏನು ಮಾಡುತ್ತಿದ್ದೀರಿ? ..”
ನಾನು – “ಹೆಚ್ಚಿನ ಜನರು ಏನನ್ನೂ ಮಾಡುವುದಿಲ್ಲ … ಹೇಗೆ ಜೀವನ ಬಂದಂತೆ ಮುಂದೆ ಸಾಗಿಸುವುದು ..” ಎಂದೆ, ಅದಕ್ಕೆ ಅವರು ಹೇಳಿದರು
“O’ goss (ಅಯ್ಯೋ), ಅದು ತಪ್ಪು, ಮಾನವ ಶರೀರ (ದೇಹ) ವು ಕುಳಿತುಕೊಳ್ಳಲು ಮಾಡಲ್ಪಟ್ಟಿಲ್ಲ … ಒಬ್ಬ ವ್ಯಕ್ತಿಯು ಸಕ್ರಿಯವಾಗಿದ್ದರೆ ಅವನು ಹೆಚ್ಚು ಕಾಲ ಬದುಕುತ್ತಾನೆ…” ಎಂದು ಹೇಳಿದರು. ನಾನು ಯೋಚಿಸಲು ಪ್ರಾರಂಭಿಸಿದೆ ಮತ್ತು ಹಲವಾರು ಉದಾಹರಣೆಗಳು ನನ್ನ ಆಲೋಚನೆಗೆ ಬರಲು ಪ್ರಾರಂಭಿಸಿದಾಗ ಅವರು ಏನು ಹೇಳುತ್ತಿದ್ದಾರೆಂದು ನನಗೆ ಅರ್ಥವಾಗತೊಡಗಿತು.
ಮ್ಯಾರಥಾನ್ ಓಟಗಾರರಿಗೆ ಜೀವನ ನಡೆಸಲು ವಯಸ್ಸಿನ ಅವಶ್ಯಕತೆ ಇಲ್ಲ ಎಂಬುದು ನಿಜವಾದರೂ, ಓಟದ ಉತ್ಸಾಹವು ವೈಯಕ್ತಿಕವಾಗಿದ್ದರಿಂದಲೇ ಜೀವನದ ನೌಕೆ ಮುಂದೆ ಸಾಗಲು ಸಾಧ್ಯ. ಉದಾಹರಣೆಗೆ
ನಮ್ಮೆಲ್ಲರ ಅಚ್ಚುಮೆಚ್ಚಿನ “ಪದ್ಮವಿಭೂಷಣ” “ಭಾರತ ರತ್ನ” ರತನಜಿ ಟಾಟಾ ಭಾರತ ಮಾತೆಯ ಸುಪುತ್ರರವರು
ಇಂದು (2023) ರತನ್ ಟಾಟಾ ಅವರಿಗೆ 86 / 87 ವರ್ಷ..ಅವರು 52-53 ನೇ ವಯಸ್ಸಿನಲ್ಲಿ ಟಾಟಾ ಗ್ರೂಪ್‌ನ ಅಧ್ಯಕ್ಷರಾದರು.. ಅವರು 22 ವರ್ಷಗಳ ಕಾಲ ಅಂದರೆ ಎಪ್ಪತ್ತೈದನೇ ವಯಸ್ಸಿನವರೆಗೆ ಈ ಸ್ಥಾನವನ್ನು ಹೊಂದಿದ್ದರು, ಮತ್ತೆ 2016 /17 ರಲ್ಲಿ ಇವರು ಕೆಲವು ದಿನಗಳ ಕಾಲ ಹಂಗಾಮಿ ಅಧ್ಯಕ್ಷರಾಗಿ ಕೆಲಸ ಮಾಡಿದರು.
ಇಂದು ಅವರು ಟಾಟಾ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ, ಅವರು ಹಣಕಾಸಿನ ನೆರವು ನೀಡುವ ಮೂಲಕ ಅನೇಕ ಸ್ಟಾರ್ಟ್‌ಅಪ್‌ಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ…
ರತನ್ ಟಾಟಾ ಅವರು ಇಂದು ತಮ್ಮ ಗ್ರೂಪ್ನಲ್ಲಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೇಗೆ ಭಾಗವಹಿಸುತ್ತಾರೆ, ಅವರ ದಿನಚರಿ ಹೇಗಿದೆ, ಎಷ್ಟು ಬ್ಯುಸಿಯಾಗಿದ್ದಾರೆ, ಈ ಎಲ್ಲ ಕೆಲಸಗಳನ್ನು ಹೇಗೆ ಎಷ್ಟೊಂದು ಇವೆ ಎಂದು ಅರಿವಾಗುತ್ತದೆ…
ರತನ್‌ಜಿ ಟಾಟಾ ಅವರು ಮುಖ್ಯವಾಗಿ ಹೇಳುತ್ತಾರೆ ಜೀವನದಲ್ಲಿ ನಿವೃತ್ತಿಯಾಗುವುದೇ? – ಇಲ್ಲ, ಇದು ಕೇವಲ ಎರಡನೇ ಇನ್ನಿಂಗ್ಸ್ !! ಪ್ರಾರಂಭವಾಗುವ ಸುಸಮಯ ಎನ್ನುತ್ತಾರೆ.
ಅದರರ್ಥ ಏನು? – ನೀವು ನಿವೃತ್ತರಾಗಿದ್ದೀರಿ ಎಂದರೆ ನೀವು ಒಂದು (ಪ್ರಾಜೆಕ್ಟ್) ಯೋಜನೆಯನ್ನು ಪೂರ್ಣಗೊಳಿಸಿದ್ದೀರಿ .. ಈಗ ಇನ್ನೊಂದು ಹೊಸ (ಪ್ರಾಜೆಕ್ಟ್) ಯೋಜನೆ ಪ್ರಾರಂಭಿಸಿ !!…
ಇನ್ನು ನಮ್ಮ ಎವರಗ್ರೀನ್, ಆಂಗ್ರಿ ಯಂಗ್ ಮ್ಯಾನ್ ಅಮಿತಾಬ್ ಬಚ್ಚನ್…
82 ನೇ ವರ್ಷದ ಪಾದಾರ್ಪಣೆ ಮಾಡಿ ಮುಂದೆ ಸಾಗುತ್ತಿದ್ದಾರೆ,
ಮತ್ತು ಇನ್ನೂ ಪ್ರಬಲ, ಸಶಕ್ತ, ಸಧೃಡ ವಾಗಿದ್ದಾರೆ …
ಕೋಟ್ಯಾನು ಕೋಟಿ ಅಭಿಮಾನಿಗಳು ಅಮಿತಾಬ್ ಬಚ್ಚನ್ ಬಗ್ಗೆ ಬರೆಯುತ್ತಿದ್ದಾರೆ, 2019 ರ ದೀಪಾವಳಿ ಸಂಚಿಕೆಯಲ್ಲಿ ನಾನು ಓದಿದ ಒಂದು ಲೇಖನ “ಬಿಗ್ ಬಿ – 50 ನಾಟ್ ಔಟ್” ಅವರು ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ…
ಇನ್ನು ಈಗಾ ಅವರು ಹಿಂದಿ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್ಪತಿ’ 23 ನೇ ಸೀಸನ್ ಪ್ರಸ್ತುತ ಪಡಿಸುತ್ತಿದ್ದಾರೆ. 2000ನೇ ಇಸವಿಯಲ್ಲಿ ಆರಂಭವಾದ ಈ ಕಾರ್ಯಕ್ರಮದ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಕಾಣಬಹುದು.
ಈ ಆಟದ 1000ನೇ ಸಂಚಿಕೆ 3ನೇ ಡಿಸೆಂಬರ್ 2021 ರಂದು ನಡೆಯುತ್ತಿರುವಾಗ, ಈ ಸಂಚಿಕೆಯಲ್ಲಿ ಮಾತನಾಡಿದ ಅಮಿತಾಬ್ ಬಚ್ಚನ್ ಅವರು ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು… “ನಾನು ಹಿರಿತೆರೆಯಲ್ಲಿ ಕೆಲಸ ಮಾಡುತ್ತಿದ್ದೆ ಆದರೆ ನನಗೆ ಕೆಲಸ ಸಿಗದ ಒಂದು ಸಮಯವಿತ್ತು, ನಂತರ 2000 ರಲ್ಲಿ ನಾನು ದೂರದರ್ಶನ ಕಾರ್ಯಕ್ರಮವನ್ನು ಮಾಡಲು ಪ್ರಾರಂಭಿಸಿದೆ. ಕಿರುತೆರೆಯಲ್ಲಿ ನಾನು “ಕೌನ್ ಬನೇಗಾ ಕರೋಡ್ಪತಿ” ಸಂಚಿಕೆಯಲ್ಲಿ ಕಾರ್ಯ ತತ್ಪರನಾಗಲು ಡಿಸೈಡ್ ಮಾಡಿದೆ ..ಆಗ ನನ್ನ ನಿರ್ಧಾರದ ಬಗ್ಗೆ ಜನ ಅನುಮಾನ ಪಡ್ತಿದ್ರು, ನನಗೆ ಕೂಡಾ ಆಗ ಇದರ ಬಗ್ಗೆ ಇಷ್ಟೊಂದು ಪ್ರಗತಿಹೊಂದುವ ಖಚಿತ ಪ್ರಮಾಣ ಇರಲಿಲ್ಲ. ಆದರೆ ಕಾಲ ಬದಲಾಗಿ ಇಂದು ನೋಡಿ 21 ವರ್ಷದಿಂದ ಈ ಕಾರ್ಯಕ್ರಮ ಮಾಡುತ್ತಿದ್ದೇನೆ…ಎಂದು ಹೇಳಿದ್ದರು, ಅದು ನನಗೆ ನೆನಪಿದೆ. ಈಗ ಇದೇ ಕಾರ್ಯಕ್ರಮವನ್ನು 23 ವರ್ಷಗಳಿಂದ ಮಾಡುತ್ತಿದ್ದಾರೆ …
ಇಂದು 82ರ ಹರೆಯದ ಅಮಿತಾಬ್ ಬಚ್ಚನ್ ತಮ್ಮ ಮಕ್ಕಳಿಗಿಂತ ಹೆಚ್ಚು ಬ್ಯುಸಿಯಾಗಿರುವಂತೆ ಕಾಣುತ್ತಿದ್ದಾರೆ.
ಉದ್ದಿಮೆದಾರರು ಹಲವು ಬಾರಿ ಉದ್ಯೋಗದಲ್ಲಿ ಸೋಲುತ್ತಾರೆ, ಅವರ ಕೈಗಾರಿಕೆಗಳನ್ನು ಮುಚ್ಚಬೇಕಾಗುತ್ತದೆ… ಟಾಟಾಅವರೂ ತಮ್ಮ ಕೆಲವು ಉದ್ಯಮಗಳನ್ನು ಮಾರಿದರು, ಕೆಲವು ಹೊಸ ಉದ್ಯಮಗಳನ್ನು ಪ್ರಾರಂಭಿಸಿದರು ಆದರೆ ನಿಲ್ಲಿಸಲಿಲ್ಲ …
ಅದಕ್ಕೇ…
ಸ್ವಯಂ ನಿವೃತ್ತಿ, ಕಡ್ಡಾಯ ನಿವೃತ್ತಿ ಅಥವಾ ವಯಸ್ಸಿನ ಮಿತಿಯಿಂದಾಗಿ ನಿವೃತ್ತಿ ಇತ್ಯಾದಿಗಳನ್ನು ಪರಿಗಣಿಸಲು ಯಾವುದೇ ಕಾರಣವಿಲ್ಲ.
ಮಾನವನ ಮನಸ್ಸು ತುಂಬಾ ಶಕ್ತಿಯುತವಾಗಿದೆ… ಇದು ನಿಮ್ಮ ಆರೋಗ್ಯ, ಯಶಸ್ಸು ಮತ್ತು ಸಂತೋಷದ ಕೀಲಿಯಾಗಿದೆ.
ಪ್ರಸಿದ್ಧ ಅಮೇರಿಕನ್ ರಿಯಾಲಿಟಿ ಶೋ ನಿರೂಪಕಿ, ಟಿವಿ ನಿರ್ಮಾಪಕಿ, ಲೇಖಕಿ, ಕಾರ್ಯಕರ್ತೆ ಓಪ್ರಾ ವಿನ್ಫ್ರೇ ಒಮ್ಮೆ ಹೇಳಿದರು – “ನೀವು ನಿಮಗೆ ಬೇಕಾದಂತೆ ಬದುಕುಲು ಆಗುವುದಿಲ್ಲ, ನೀವು ನಿಮ್ಮ ದೃಢ ನಿರ್ಧಾರ ಖಚಿತ ಗೊಳಿಸಿ ಅದನ್ನು ನಂಬುವಂತೆ ಬದುಕಿ ತೋರಿಸಬೇಕು .”
ಅದಕ್ಕಾಗಿಯೇ ನನ್ನ ಯೋಚನೆ – ನಿವೃತ್ತಿ ?? ಎಂಬುದು ಇಲ್ಲ – ಇದು ಕೇವಲ ಎರಡನೇ ಇನ್ನಿಂಗ್ಸ್!!ಪ್ರಾರಂಭ !!
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!