ಶೃಂಗೇರಿಯಲ್ಲಿ ಆದಿ ಶಂಕರಾಚಾರ್ಯರ ಮೂರ್ತಿ ಅನಾವರಣ

Team Newsnap
1 Min Read

ಶೃಂಗೇರಿ : ಆದಿ ಶಂಕರಾಚಾರ್ಯರ 32 ಅಡಿ ಎತ್ತರದ ಶಿಲಾಮಯ ಮೂರ್ತಿಯನ್ನು ಶಾರದಾ ಪೀಠದ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿ ಅನಾವರಣಗೊಳಿಸಿದರು.

ಶಂಕರಾಚಾರ್ಯರ ವಿಗ್ರಹದೊಂದಿಗೆ ಅವರ ಶಿಷ್ಯರಾದ ಶ್ರೀ ಸುರೇಶ್ವರಾ ಚಾರ್ಯರು, ಶ್ರೀ ಪದ್ಮಪಾದಾಚಾರ್ಯರು, ಶ್ರೀ ಹಸ್ತಮಲಕಾಚಾರ್ಯರು ಹಾಗೂ ವಿಜಯನಗರ ಸಾಮ್ರಾಜ್ಯದ ರೂವಾರಿಯಾದ ಜಗದ್ಗುರು ಶ್ರೀ ವಿದ್ಯಾ ರಣ್ಯರ 12 ಅಡಿ ಎತ್ತರದ ಶಿಲಾಮಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಜತೆಗೆ ಶ್ರೀ ಆಂಜನೇಯ ವಿಗ್ರಹವೂ ಇದೆ.

ಶ್ರೀ ಆಂಜನೇಯ ವಿಗ್ರಹ

ಪಟ್ಟಣದ ಹೊರವಲಯದ ಮಾರುತಿ ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಶಂಕರಾಚಾರ್ಯರ ಶಿಲಾಮಯ ಮೂರ್ತಿಯ ಈ ಪ್ರದೇಶಕ್ಕೆ ಜಗದ್ಗುರುಗಳು ಶಂಕರಗಿರಿ ಎಂದು ನಾಮಕರಣ ಮಾಡಿದ್ದಾರೆ. ನಿವೃತ್ತಿ? – ಅಥವಾ ಅದು ಜೀವನದ ಎರಡನೇ ಇನ್ನಿಂಗ್ಸ್ 

ಶಂಕರಗಿರಿಯಲ್ಲಿ ಮ್ಯೂಸಿಯಂ, ಗ್ರಂಥಾಲಯ, ಸಭಾಂಗಣ, ನೀರಿನ ಕಾರಂಜಿ ನಿರ್ಮಿಸಲಾಗಿದೆ. ಇನ್ನೂ ಒಂದು ತಿಂಗಳ ಬಳಿಕ ಸಾರ್ವಜನಿಕರಿಗೆ ಪ್ರವೇಶ ಸಿಗಲಿದೆ ಎಂದು ಮಾಹಿತಿ ದೊರಕಿದೆ.

Share This Article
Leave a comment