ಟಿಪ್ಪು ನೆನಪಿಗಾಗಿ ಕೊಲ್ಲೂರು ಮೂಕಾಂಬಿಕ ದೇಗುಲದಲ್ಲಿ ನಡೆಯುವ ಸಲಾಂ ಮಂಗಳಾರತಿ ಎಂಬ ಹೆಸರು ತೆಗೆಯುವಂತೆ ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.
ಟಿಪ್ಪು ಒಬ್ಬ ಕ್ರೂರಿ, ಮತಾಂಧ, ಕನ್ನಡ ಮತ್ತು ಹಿಂದೂ ವಿರೋಧಿ ಎಂದಿರುವ ವಿಶ್ವ ಹಿಂದೂ ಪರಿಷತ್ ಕೂಡಲೇ ಸಲಾಂ ಮಂಗಳಾರತಿ ಹೆಸರು ಬದಲಿಸಿ ಎಂದು ಆಗ್ರಹಿಸಿದೆ.
ಟಿಪ್ಪು ಸಾವಿರಾರು ಹಿಂದೂಗಳ ನರಮೇಧ ನಡೆಸಿದ್ದಾರೆ. ನೂರಾರು ದೇವಸ್ಥಾನಗಳು ಧ್ವಂಸ ಮಾಡಿದ್ದಾರೆ. ಹೀಗಾಗಿ ಟಿಪ್ಪು ಹೆಸರಿನಲ್ಲಿ ಮಂಗಳಾರತಿ ಸರಿಯಲ್ಲ, ಇದು ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಆಗುತ್ತದೆ. ಸಲಾಂ ಹೆಸರಲ್ಲಿ ಮಂಗಳಾರತಿ ಗುಲಾಮಗಿರಿ ಸಂಕೇತ ಎಂದಿದೆ.
ಧಾರ್ಮಿಕ ದತ್ತಿ ಇಲಾಖೆ ಈ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಕಾರ್ಯನಿರ್ವಹಣಾಧಿಕಾರಿ, ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಗೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ.
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
- ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
More Stories
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ