May 26, 2022

Newsnap Kannada

The World at your finger tips!

bommai

C M ಬೊಮ್ಮಾಯಿ ಟ್ವಿಟ್ಟರ್ ಖಾತೆ 18 ನಿಮಿಷಗಳ ಕಾಲ ಹ್ಯಾಕ್

Spread the love

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ಟ್ವಿಟ್ಟರ್ ಖಾತೆ ಇಂದು ಬೆಳಿಗ್ಗೆ @ಸಿಎಂ ಆಫ್ ಕರ್ನಾಟಕ ಕೆಲವು ನಿಮಿಷಗಳ ಕಾಲ ಹ್ಯಾಕ್ ಆಗಿದೆ.

ಇಂದು ಬೆಳಗ್ಗೆ 6 ಗಂಟೆಯಿಂದ 6.18 ರವರೆಗೆ 18 ನಿಮಿಷಗಳ ಕಾಲ ಟ್ವಿಟ್ಟರ್ ಖಾತೆ ಹ್ಯಾಕ್ ಹಾಗಿರುವ ಬಗ್ಗೆ ಟ್ವೀಟಿಗರು ಅನುಮಾನ ವ್ಯಕ್ತಪಡಿಸಿದ್ದರು.

ನೂರಕ್ಕೂ ಹೆಚ್ಚು ಟ್ವೀಟ್‍ಗಳನ್ನು ಮಾಡಿ ಹ್ಯಾಕ್ ಆಗಿರುವ ಬಗ್ಗೆ ಸಿಎಂ ಟ್ವೀಟ್ ಫಾಲೋವರ್ಸ್ ಮಾಹಿತಿ ಹಂಚಿಕೊಂಡಿದ್ದರು.

ಇತ್ತೀಚೆಗೆ ಖಾತೆ ತೆರೆದವರ ಪ್ರೊಫೈಲ್ ಸೇರಿದಂತೆ ಹಲವರನ್ನು ಟ್ಯಾಗ್ ಮಾಡಲಾಗಿತ್ತು ಇದನ್ನು ಗಮನಿಸಿದಾಗ ಹ್ಯಾಕ್ ಆಗಿರುವ ಬಗ್ಗೆ ಅನುಮಾನ ಬಂದಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಸಿಎಂ ಕಚೇರಿಯ ಸೋಷಿಯಲ್ ಮೀಡಿಯಾ ಟೀಂ, ಎಲ್ಲಾ ಟ್ವೀಟ್‍ಗಳನ್ನು ಅಳಿಸಿಹಾಕಿ ಖಾತೆಯನ್ನು ಸರಿಪಡಿಸಿದೆ.

error: Content is protected !!