May 21, 2022

Newsnap Kannada

The World at your finger tips!

rrr 1

RRR ಮೊದಲ ದಿನವೇ 240 ಕೋಟಿ ರು ದಾಖಲೆ ಕಲೆಕ್ಷನ್:ಬಾಕ್ಸ್ ಆಫೀಸ್ ಕಿಂಗ್ ರಾಜಮೌಳಿ

Spread the love

RRR ಸಿನಿಮಾ ಭಾರತದ ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದೆ. ಶುಕ್ರವಾರವಷ್ಟೇ ಬಿಡುಗಡೆಯಾದ ಆರ್‌ಆರ್‌ಆರ್ ಸಿನಿಮಾ ಮೊದಲ ದಿನದಂದೇ ಎಲ್ಲಾ ಭಾಷೆಗಳಿಂದಲೂ 240 ಕೋಟಿ ಕಲೆಕ್ಷನ್ ಮಾಡಿದೆ.

ವಿಶ್ವದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ತೆರೆಕಂಡಿರುವ ಆರ್‌ಆರ್‌ಆರ್ ಸಿನಿಮಾ ತೆಲುಗಿನಲ್ಲಿ ಮಾತ್ರವಲ್ಲದೇ ತಮಿಳಿನಲ್ಲಿ 10 ಕೋಟಿ, ಹಿಂದಿಯಲ್ಲಿ 25 ಕೋಟಿ, ಕನ್ನಡದಲ್ಲಿ 14 ಕೋಟಿ, ಮಲಯಾಳಂನಲ್ಲಿ 4 ಕೋಟಿ ರೂ.ವನ್ನು ಗಳಿಸಿದೆ.

ಯುಎಸ್‍ಎ, ಯುಕೆ, ಆಸ್ಟ್ರೇಲಿಯಾ, ಕೆನಡಾ ಮತ್ತು ಮಧ್ಯಪ್ರಾಚ್ಯದಲ್ಲಿ ಈ ಚಿತ್ರವು 75 ಕೋಟಿ ರೂ.ಗೂ ಹೆಚ್ಚು ಹಣವನ್ನು ಗಳಿಸಿದೆ ಎಂದು ಹೇಳಲಾಗುತ್ತಿದೆ.

ಆರ್‌ಆರ್‌ಆರ್ ಸಿನಿಮಾ ಪ್ರೇಕ್ಷಕರಿಂದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ.
ಒಡಿಶಾ, ಮಹಾರಾಷ್ಟ್ರ, ಗುಜರಾತ್ ಮತ್ತು ಯುಪಿಯ ಕೆಲವು ಸ್ಥಳಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.

error: Content is protected !!