ಆಕ್ಷೇಪಾರ್ಹ ಪದ ಬಳಸಿದ್ದ ನಟ ಉಪೇಂದ್ರಗೆ ರಿಲೀಫ್.- ಬುದ್ಧಿವಂತ ಸಧ್ಯಕ್ಕೆ ಬಚಾವ್ ?

Team Newsnap
1 Min Read

ಬೆಂಗಳೂರು : ಅವಹೇಳನಕಾರಿ ಮಾತು ಹೇಳಿದ ಆರೋಪದಲ್ಲಿ ನಟ ಉಪೇಂದ್ರ ವಿರುದ್ಧದ ದಾಖಲಾಗಿದ್ದ ಎಫ್ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಬೆಂಗಳೂರಿನ ಚೆನ್ನಮ್ಮನಕೆರೆ ಪೊಲೀಸ್ ಠಾಣೆಯ FIRಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಆದೇಶಿಸಿದೆ.

ಅಟ್ರಾಸಿಟಿ ಕೇಸ್‌ನಲ್ಲಿ FIR ದಾಖಲಾದ ಮೇಲೆ ಉಪೇಂದ್ರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಕನ್ನಡ ಗಾದೆಯನ್ನು ಬಳಸಿದ್ದಕ್ಕಾಗಿ ಅರ್ಜಿದಾರರ ವಿರುದ್ಧ ಸುಳ್ಳು ದೂರು ನೀಡಲಾಗಿದೆ. ಕ್ಷುಲ್ಲಕ ಮತ್ತು ಪ್ರಚಾರಕ್ಕಾಗಿ ದೂರನ್ನು ದಾಖಲಿಸಲಾಗಿದೆ. ಹೀಗಾಗಿ ಅಟ್ರಾಸಿಟಿ ಕೇಸ್‌ನ ತನಿಖೆಗೆ ಮಧ್ಯಂತರ ತಡೆಯಾಜ್ಞೆಗೆ ಮನವಿ ಮಾಡಿದ್ದರು.

ಉಪೇಂದ್ರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಚೆನ್ನಮ್ಮನಕೆರೆ ಪೊಲೀಸರು ಹಾಕಿದ್ದ FIRಗೆ ಮಾತ್ರ ತಡೆಯಾಜ್ಞೆ ನೀಡಿದೆ.

ಆಕ್ಷೇಪಾರ್ಹ ಪದ ಬಳಕೆಗೆ ನಟ ಉಪೇಂದ್ರ ವಿರುದ್ಧ ಇನ್ನೂ ಹಲವು ದೂರು ದಾಖಲಾಗಿದೆ.ಭಾರತದ ಚಂದ್ರಯಾನ -3 : ಚಂದ್ರ ಇನ್ನು ಕೇವಲ 177 ಕಿಮಿ ದೂರ- ಚಂದ್ರನ ಸ್ಪರ್ಶಕ್ಕೆ ದಿನ ಗಣನೆ

ಕೇವಲ ಒಂದು ಎಫ್ಐಆರ್‌ಗೆ ಮಾತ್ರ ತಡೆಯಾಜ್ಞೆ ನೀಡಲಾಗಿದೆ. ಇನ್ನೂ ಬೇರೆ, ಬೇರೆ ಪೊಲೀಸ್ ಠಾಣೆಯಲ್ಲೂ ಎಫ್ಐಆರ್‌ಗಳು ದಾಖಲಾಗಿವೆ. ರಾಜ್ಯದ ಹಲವೆಡೆ ಉಪೇಂದ್ರ ವಿರುದ್ಧ ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

Share This Article
Leave a comment