ಮಂಡ್ಯ ಕಬ್ಬಿನ ಬೆಳೆಗಾಗಿ ವಿಸಿ ನಾಲೆಗೆ ಕಾವೇರಿ ನೀರು ಬಿಡುಗಡೆ

Team Newsnap
1 Min Read
heavy rain in Kodagu: Inflow to KRS begins ಕೊಡಗಿನಲ್ಲಿ ವರುಣನ ಅಬ್ಬರ : ಕೆಆರ್ ಎಸ್ ಗೆ ಒಳ ಹರಿವು ಆರಂಭ

ಮಂಡ್ಯ : ಮಂಡ್ಯದಲ್ಲಿ ಬೇಸಿಗೆ ಕಬ್ಬಿಗೆ ಅಗತ್ಯವಾದ ನೀರನ್ನು ಜಲಸಂಪನ್ಮೂಲ ಇಲಾಖೆ ಮಂಗಳವಾರ ರಾತ್ರಿ ಬಿಡುಗಡೆ ಮಾಡಿದೆ.

ಜಿಲ್ಲೆಯಲ್ಲಿ ಬೆಳೆದು ನಿಂತ ಕಬ್ಬಿಗೆ ಈಗ ಅಗತ್ಯ ನೀರು ಕೊಡದೇ ಹೋದರೆ40 ಲಕ್ಷಕ್ಕೂ ಅಧಿಕ ಟನ್ ಕಬ್ಬು ನೀರಿಲ್ಲದೇ ಒಣಗಿ ಹೋಗಿ ರೈತರಿಗೆ ಭಾರಿ ನಷ್ಟ ಉಂಟಾಗುತ್ತಿತ್ತು.

ರೈತರ ಒತ್ತಾಯಕ್ಕೆ ಮಣಿದು ಜಿಲ್ಲಾ ಮಂತ್ರಿ ಚಲುವರಾಯಸ್ವಾಮಿ ಅವರ ನಿರ್ಧೇಶನದ ಮೇರೆಗೆ ವಿಶ್ವೇಶ್ವರಯ್ಯ ನಾಲೆಗೆ 2500 ಕ್ಯುಸೆಕ್ ಹಾಗೂ ಕುಡಿಯುವ ನೀರಿಗಾಗಿ ಕಾವೇರಿ ನದಿಗೆ 500 ಕ್ಯುಸೆಕ್ ನೀರನ್ನು ನೀರಾವರಿ ಇಲಾಖೆ ಬಿಡುಗಡೆ ಮಾಡಿದೆ.ಮಂಡ್ಯದ ಹುಡುಗಿ ಜೊತೆ ನಟ ಪ್ರಥಮ್ ನಿಶ್ಚಿತಾರ್ಥ

ಕೆಆರ್ ಎಸ್ ಆಣೆಕಟ್ಟೆಯಲ್ಲಿ ಈಗ 83 ಅಡಿ ನೀರಿದೆ. ಒಂದೆರಡು ದಿನದಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಳ್ಳುವ ಸಾದ್ಯತೆ ಇದೆ ಈ ನಡುವೆ ಮಂಗಳವಾರ ಸಂಜೆ ಕೆ ಆರ್ ಎಸ್ ಸುತ್ತ ಮುತ್ತ ಭಾರಿ ಮಳೆ ಸುರಿದಿದೆ.

Share This Article
Leave a comment