ಮಂಡ್ಯದ ಹುಡುಗಿ ಜೊತೆ ನಟ ಪ್ರಥಮ್ ನಿಶ್ಚಿತಾರ್ಥ

Team Newsnap
1 Min Read
Actor Pratham is engaged to a girl from Mandya ಮಂಡ್ಯದ ಹುಡುಗಿ ಜೊತೆ ನಟ ಪ್ರಥಮ್ ನಿಶ್ಚಿತಾರ್ಥ

ಮಂಡ್ಯ : ಪ್ರಥಮ್ ಮಂಡ್ಯ ಮೂಲದ ಭಾನುಶ್ರೀ ಯೊಂದಿಗೆ ಸಪ್ತಪದಿ ತುಳಿಯಲಿದ್ದಾರೆ ಸಂಪ್ರದಾಯಸ್ಥ ಕುಟುಂಬದ ಸಿಂಪಲ್ ಹುಡುಗಿಯನ್ನು ಪ್ರಥಮ್ ಮದುವೆಯಾಗುತ್ತಿದ್ದಾರೆ.

ಕರ್ನಾಟಕದ ಆಳಿಯ ಎಂದು ರೇಗಿಸುತ್ತಿದ್ದ ಪ್ರಥಮ್ ಈಗ ಮಂಡ್ಯದ ಆಳಿಯ. ಮಂಡ್ಯ ಮೂಲದ ಭಾನುಶ್ರೀ ಜೊತೆ ಪ್ರಥಮ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸೋಮವಾರ ಸಂಜೆ ಮಂಡ್ಯ ಪಕ್ಕದ ಹಳ್ಳಿಯಲ್ಲಿ ಎರಡೂ ಫ್ಯಾಮಿಲಿಯ ಹಿರಿಯರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಭಾನುಶ್ರೀ ಡಿಗ್ರಿ ಮುಗಿಸಿ ಸ್ನಾತಕೋತ್ತರ ಶಿಕ್ಷಣಕ್ಕೆ ಸಜ್ಜಾಗುತ್ತಿದ್ದರು. ಪ್ರಥಮ್ ಹಳ್ಳಿ ಹುಡುಗಿಯನ್ನು ಮದುವೆ ಆಗ್ತೀನಿ ಅಂತ ಹೇಳುತ್ತಿದ್ದರು. ಆದರಂತೆಯೇ ಬಡ ಕುಟುಂಬದ ಹುಡುಗಿಯನ್ನು ಒಳ್ಳೆಯ ಹುಡುಗ ಪ್ರಥಮ್ ಮದುವೆ ಆಗುತ್ತಿದ್ದಾರೆ.

ನನ್ನ ಹಿರಿಯರು ನೋಡಿದ್ದ ಹುಡುಗಿಯೊಂದಿಗೆ ನಿಶ್ಚಿತಾರ್ಥ ಆಯ್ತು. ಯಾವ ಆಡಂಬರ,ಸಂಭ್ರಮ,‌ ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ.

ನಾನು ತುಂಬಾ ಸರಳವಾಗಿಯೇ ಬದುಕಿದವನು,ಹಾಗೇ ಇರೋಕೆ ಇಷ್ಟ. ನನ್ನ ಎಂಗೇಜ್ಮೆಂಟ್ ದೇಶದ ದೊಡ್ಡ ಸುದ್ಧಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ಬೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ. ಆದಾಯ ಮೀರಿ ಆಸ್ತಿ ಗಳಿಕೆ : ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್‌ ತಡೆ

ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟುಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ. ಹೀಗೇ ಇದ್ದು ಬಿಡ್ತೀನಿ. ಹರಸುವವರು ಅಲ್ಲಿಂದಲೇ ಹರಸಿ. ಅದೇ ಆಶೀರ್ವಾದ ಎಂದು ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Share This Article
Leave a comment