July 7, 2022

Newsnap Kannada

The World at your finger tips!

death,BJP,suicide

rekha: i was in 6 years live in relationship

ನಾನು ಹನಿಟ್ರ್ಯಾಪ್ ಮಾಡಿಲ್ಲ : ಅನಂತರಾಜು ಜೊತೆ 6 ವರ್ಷ ಲಿವ್​ ಇನ್​ ರಿಲೇಶನ್​ಶಿಪ್ – ರೇಖಾ ಕಣ್ಣೀರು

Spread the love

ನಾನು ಮತ್ತು ಅನಂತರಾಜು ಇಬ್ಬರೂ 6 ವರ್ಷದಿಂದ ಲಿವ್​ ಇನ್​ ರಿಲೇಶನ್​ಶಿಪ್​ನಲ್ಲಿ ಇದ್ದೆ, ಹನಿಟ್ರ್ಯಾಪ್ ಮಾಡಿಲ್ಲ, ನಿಜ ನಾನು ತಪ್ಪು ಮಾಡಿದೆ. ಅವರ ಸಾವಿಗೆ ನಾನು ಕಾರಣ ಅಲ್ಲ, ನಾನು ಆತ್ಮಹತ್ಯೆಗೆ ಪ್ರಚೋದನೆ ನೀಡಿಲ್ಲ.

  • ಇದು ಬ್ಯಾಡರಹಳ್ಳಿ ಬಿಜೆಪಿ ಮುಖಂಡ ಅನಂತರಾಜು ಗೆಳತಿ ರೇಖಾ ಪೋಲಿಸ್ ಠಾಣೆ ಮುಂದೆ ಮಾಧ್ಯಮದವರ ಜೊತೆ ತಮ್ಮ ಅಳಲು ತೋಡಿಕೊಂಡರು

ಪತ್ನಿ ಸುಮಾ ಕೊಟ್ಟ ಟಾರ್ಚರ್​ಗೆ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನಗೆ ನ್ಯಾಯ ಬೇಕು. ನನ್ನಲ್ಲಿರುವ ಎಲ್ಲಾ ಆಡಿಯೋವನ್ನೂ ಪೊಲೀಸರಿಗೆ ಕೊಟ್ಟಿದ್ದೇನೆ. ನನಗೆ ಮತ್ತು ನನ್ನ ಮಕ್ಕಳಿಗೆ ಜೀವ ಬೆದರಿಕೆ ಇದೆ… ಪ್ಲೀಸ್​ ನನಗೆ ನ್ಯಾಯ ಕೊಡಿಸಿ… ಎಂದಿದ್ದಾರೆ ಪ್ರೇಯಸಿ ರೇಖಾ

ಇದನ್ನು ಓದಿ –ಗಂಡ, ಮಾವ, ಅತ್ತೆ ಕಿರುಕುಳವೇ ಸ್ಫೂರ್ತಿ; IAS ಪಾಸ್ ಮಾಡಿದ 7 ವರ್ಷದ ಮಗುವಿನ ತಾಯಿ

ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಂತರಾಜು​, ಮೇ 12ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಅನಂತರಾಜು ಆತ್ಮಹತ್ಯೆ ಮಾಡಿಕೊಂಡದ್ದು ತುಂಬಾ ನೋವು ತಂದಿದೆ. ನಾನು ಹನಿಟ್ರ್ಯಾಪ್ ಮಾಡಿಲ್ಲ, ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ಸುಮಾಳ ಕಿರುಕುಳದಿಂದಲೇ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿರೋದು. ಅನಂತರಾಜು ಈ ಹಿಂದೆ ಒಂದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ರು. ಆ ವೇಳೆ ಅವರಿಂದ ಸುಮಾ ಬಲವಂತವಾಗಿ ಡೆತ್​ನೋಟ್ ಬರೆಸಿಕೊಂಡಿದ್ದಾರೆ.

ನಾನು ಸಾಮಾನ್ಯ ಮಹಿಳೆ. ನನಗೆ ದಿನೇದಿನೆ ಕಿರುಕುಳ ಹೆಚ್ಚಾಗ್ತಿದೆ. ನಾನು ತಪ್ಪು ಮಾಡಿಲ್ಲ, ಯಾವುದೇ ತನಿಖೆಗೂ ನಾನು ಸಿದ್ಧ. ಸುಮಾ ವಿರುದ್ದ ದೂರು ನೀಡುತ್ತೇನೆ. ಸಿಎಂ ಮತ್ತು ಗೃಹ ಸಚಿವರು ನನಗೆ ನ್ಯಾಯ ಕೊಡಿಸಬೇಕು. ನನ್ನಲ್ಲಿರುವ ಎಲ್ಲ ಆಡಿಯೋಗಳನ್ನು ಪೊಲೀಸರಿಗೆ ಕೊಟ್ಟಿದ್ದೇನೆ ಎಂದರು.

error: Content is protected !!