July 4, 2022

Newsnap Kannada

The World at your finger tips!

love birds

ಲವ್ ಮಾಕ್ಟೈಲ್ ನಂತರ ಲವ್ ಬರ್ಡ್ಸ್ ಆಗಿ ಮೂಡಿ ಬರುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ

Spread the love

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿ ಸಿನಿಮಾದಲ್ಲಿ ಪ್ರೇಮಿಯಾಗಿ ಪಾತ್ರ ಮಾಡಿದ್ದವರು, ನಿಜ ಜೀವನದಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಲವ್ ಮಾಕ್ಟೈಲ್ ಇಬ್ಬರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಆನಂತರ ಅವರು ಲವ್ ಮಾಕ್ಟೈಲ್ 2 ನಲ್ಲೂ ಜೊತೆಯಾಗಿಯೇ ನಟಿಸಿದರು. ಬಾಕ್ಸ್ ಆಫೀಸಿನಲ್ಲಿ ಲವ್ ಮಾಕ್ಟೈಲ್ 2 ಅಷ್ಟೇನೂ ಸದ್ದು ಮಾಡದೇ ಇದ್ದರೂ, ಜೋಡಿಯು ನೋಡುಗರಿಗೆ ಇಷ್ಟವಾಯಿತು.

ಇದನ್ನು ಓದಿ –ಮಂಗಳಮುಖಿ ಸರ್ಕಾರ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ

WhatsApp Image 2022 05 25 at 5.51.30 PM

ನಿರ್ದೇಶಕ ಪಿ.ಸಿ.ಶೇಖರ್ ಮತ್ತೊಂದು ಹೊಸ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಅದಕ್ಕೆ ಬ್ಯುಟಿಫುಲ್ ಆಗಿರುವ ಶೀರ್ಷಿಕೆ ಲವ್ ಬರ್ಡ್ಸ್ ಎಂದು. ರಿಯಲ್ ಲೈಫ್‍ನ ಲವ್ ಬರ್ಡ್ಸ್ ಅನ್ನೇ ನಾಯಕ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕಥೆಗೂ ಮತ್ತು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಜೋಡಿಗೂ ಹೊಂದಾಣಿಕೆ ಆಗುತ್ತಿದ್ದರಿಂದ, ಇದೇ ಜೋಡಿಯನ್ನು ಆಯ್ಕೆ ಮಾಡಿಕೊಂಡು, ಸಿನಿಮಾ ಮಾಡುತ್ತಿದ್ದಾರೆ.

WhatsApp Image 2022 05 25 at 5.47.14 PM
darling krishna and milana nagraj

ಲವ್ ಬರ್ಡ್ಸ್ ಚಿತ್ರಕ್ಕೆ ಮಿಲನಾ ನಾಗರಾಜ್ ನಾಯಕಿಯಾದರೆ, ಡಾರ್ಲಿಂಗ್ ಕೃಷ್ಣ ನಾಯಕ. ಮದುವೆಯಾದ ಜೋಡಿಯ ನಂತರದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆಯಂತೆ. ದಾಂಪತ್ಯ ಜೀವನದ ಹಲವು ಸಂಗತಿಗಳನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕರು.

error: Content is protected !!