ಮಂಡ್ಯದಲ್ಲಿ ಮಳೆಹಾನಿಯಿಂದ ಉಂಟಾಗುವ ಮನೆ ಹಾನಿ ಪ್ರಕರಣಗಳಲ್ಲಿ ನೀಡಲಾಗುವ ಪರಿಹಾರ ಹಣವನ್ನು 48 ಗಂಟೆಯೊಳಗಾಗಿ ಫಲಾನುಭವಿಗಳಿಗೆ ಆರ್.ಟಿ.ಜಿ.ಎಸ್ ಮೂಲಕ ಪಾವತಿಸಿ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿ.ರಾಮ್ ಪ್ರಸಾದ್ ಮನೋಹರ್ ಅಧಿಕಾರಿಗಳಿಗೆ ಸೂಚಿಸಿದರು

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಳೆ ಹಾನಿ ಪ್ರಕರಣಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಪತ್ತು ಯಾವ ಸಮಯದಲ್ಲಾದರೂ ಸಂಭವಿಸಬಹುದು. ಅದಕ್ಕೆ ಪೂರ್ವಸಿದ್ಧತೆ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಪರಿಹರಿಸಲು ಸಾಧ್ಯ. ಮನೆಹಾನಿ ಪ್ರಕರಣಗಳಲ್ಲಿ ಪರಿಹಾರ ಪಾವತಿಸಲು ಇಲಾಖೆಗಳ ಸಮನ್ವಯ ಅತಿಮುಖ್ಯ ಎಂದರು.
ಇದನ್ನು ಓದಿ –ಲವ್ ಮಾಕ್ಟೈಲ್ ನಂತರ ಲವ್ ಬರ್ಡ್ಸ್ ಆಗಿ ಮೂಡಿ ಬರುತ್ತಿದ್ದಾರೆ

ತಾಲ್ಲೂಕು ಆಡಳಿತ ಚುರುಕಾಗಲಿ :
ಅತಿ ಹೆಚ್ಚು ಮಳೆ ಉಂಟಾದ ಸಂದರ್ಭದಲ್ಲಿ ಪ್ರಾಣ ಹಾನಿ, ಮನೆ ಹಾನಿ, ಬೆಳೆ ಹಾನಿ ಹಾಗೂ ಕಟ್ಟಡ ಇನ್ನಿತರ ಹಾನಿ ಉಂಟಾಗಬಹುದು. ಮೊದಲು ಯಾವುದೇ ರೀತಿಯ ಪ್ರಾಣ ಹಾನಿ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ. ಹೆಚ್ಚು ಕ್ಷೇತ್ರ ಪ್ರವಾಸ ಕೈಗೊಂಡು ಜನರಿಗೆ ಉಂಟಾಗುವ ತೊಂದರೆಗಳ ಬಗ್ಗೆ ತಿಳಿದುಕೊಂಡು ಸಾರ್ವಜನಿಕರಿಗೆ ವಿಪತ್ತಿನ ಸಂದರ್ಭದಲ್ಲಿ ವಹಿಸಬೇಕಾದ ಮುನ್ನಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ ಎಂದರು.
ಮನೆ ಹಾನಿ ಸಂದರ್ಭದಲ್ಲಿ ಮನೆಯಲ್ಲಿ ನೀರು ತಂಬಿಕೊಂಡು ಮನೆಯಲ್ಲಿರುವ ಪಾತ್ರೆ, ಬಟ್ಟೆ ಇನ್ನಿತರೆ ವಸ್ತುಗಳು ಅನುಪಯುಕ್ತವಾದರೆ ಹೆಚ್ಚಿನ ಪರಿಹಾರ ನೀಡಲು ಅವಕಾಶವಿದೆ. ಇದನ್ನು ಪರಿಶೀಲಿಸಿ ಪರಿಹಾರ ಒದಗಿಸಿ. ಜನ ಸಾಮಾನ್ಯರ ತೊಂದರೆಗೆ ಅಧಿಕಾರಿಗಳು ಸ್ಪಂದಿಸಿ, ಪಲಾನುಭವಿಗಳನ್ನು ಅಲೆದಾಡಿಸಬೇಡಿ. ಸಕಾಲಕ್ಕೆ ಪರಿಹಾರ ನೀಡಿ. ಅನುದಾನವನ್ನು ಸದುಪಯೋಗ ಪಡಿಸಿಕೊಂಡು ಬಹಳ ಜಾಗೃತಿ ವಹಿಸಿ ಕಾರ್ಯನಿರ್ವಹಿಸಿ ಎಂದರು.

ಮಳೆಯಿಂದ ಕುಸಿದ ಅಂಗನವಾಡಿ ಮತ್ತು ಶಾಲಾ ಕಟ್ಟಡಗಳನ್ನು ಶೀಘ್ರದಲ್ಲಿ ಪರಿಶೀಲನೆ ನಡೆಸಿ ಅವುಗಳ ದುರಸ್ತಿಗೆ ಕ್ರಿಯಾಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ. ಪ್ರವಾಹಕ್ಕೆ ಒಳಗಾಗುವ ಗ್ರಾಮಗಳನ್ನು ಗುರುತಿಸಿ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಿ, ಅವಶ್ಯಕವಿರುವ ಕಡೆ ಕಾಳಜಿ ಕೇಂದ್ರ, ಗೋಶಾಲೆ ತೆರೆಯಲು ಸ್ಥಳ ಗುರುತಿಸಿ ಎಂದರು.
ಆರೋಗ್ಯ ಇಲಾಖೆ ವತಿಯಿಂದ ರ್ಯಾಪಿಡ್ ರ್ಯಸ್ಪಾನ್ಸ್ ಟೀಂ ಕಾರ್ಯನಿರ್ವಹಿಸುತ್ತಿದ್ದು. ಮಳೆನೀರು ಶೇಖರಣೆಯಾಗಿ ಉಂಟಾಗುವ ಸಾಂಕ್ರಮಿಕ ರೋಗ, ಸ್ವಚ್ಛತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ವಿಪತ್ತು ನಿರ್ವಹಣೆಗಾಗಿ ಬೇಕಿರುವ ಎಲ್ಲಾ ಮೂಲ ಸೌಕರ್ಯವನ್ನು ಸಿದ್ಧತೆ ಮಾಡಿಕೊಳ್ಳಿ ಎಂದರು.
ನಗರ ಸ್ಥಳೀಯ ಸಂಸ್ಥೆಗಳು ಚರಂಡಿಗಳಲ್ಲಿ ನೀರು ನಿಲ್ಲದಂತೆ ಹೂಳು ತೆಗೆಯಬೇಕು, ತೆಗೆಯುವಂತಹ ಹೂಳು ಸರಿಯಾದ ರೀತಿಯಲ್ಲಿ ವಿಲೇವಾರಿಯಾಗಬೇಕು. ಮಳೆ ನೀರು ಹರಿದುಹೋದರೆ ನಗರಗಳಲ್ಲಿ ಸಮಸ್ಯೆ ಉಂಟಾಗುವುದಿಲ್ಲ. ಅಂಗನವಾಡಿ ಹಾಗೂ ಶಾಲಾ ಮುಂಭಾದ ಚರಂಡಿಗಳು ವ್ಯವಸ್ಥಿತವಾಗಿ ನಿರ್ವಹಣೆಯಾಗಬೇಕು. ವಾರ್ಡ್‍ವಾರು ಕಮಿಟಿಗಳು ಚುರುಕಾಗಿ ಕಾರ್ಯನಿರ್ವಹಿಸುವಂತೆ ಮಾಡಿ ಎಂದರು.
ಜಿಲ್ಲೆಯಲ್ಲಿ ಮಳೆಯಿಂದ ಆಗಿರುವಂತಹ ಅನಾಹುತವನ್ನು ಮನನಮಾಡಿಕೊಂಡು ಜನಸಾಮಾನ್ಯರ ನಷ್ಟಕ್ಕೆ ಪರಿಹಾರ ನೀಡಿ. ಜಿಲ್ಲೆಯ ಜನತೆಗೆ ಬಗ್ಗೆ ಕಾಳಜಿವಹಿಸಿ ಅಭಿವೃದ್ದಿಯತ್ತ ನಿಯಮಾನುಸಾರ ಕಾರ್ಯನಿರ್ವಹಿಸಿ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್. ಅಶ್ವತಿ ಜಿ.ಪಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್.ಜೆ.ದಿವ್ಯಪ್ರಭು,ಅಪರ ಜಿಲ್ಲಾಧಿಕಾರಿ ವಿ.ಆರ್. ಶೈಲಜಾ, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಐಶ್ವರ್ಯ, ತಹಶೀಲ್ದಾರ್‍ಗಳಾದ ಕಂಇ ಅಹಮದ್, ಎಂ. ವಿ.ರೂಪ. ಎನ್.ಶ್ವೇತಾ, ನಯನ, ನರಸಿಂಹ ಮೂರ್ತಿ, ನಂದೀಶ್, ವಿಜಿಯಣ್ಣ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಸ್ವಾಮಿಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎಸ್.ಅಶೋಕ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶರಾದ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳ ಪರಿಶೀಲನೆ:
ಸಭೆಗೂ ಮುನ್ನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿ.ರಾಮ್ ಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ ಎಸ್.ಅಶ್ವತಿ ಹಾಗೂ ಅಧಿಕಾರಿಗಳ ತಂಡ ಹಾಲಳ್ಳಿ ಸ್ಲಂ ಬೀಡಿ ಕಾರ್ಮಿಕರ ಕಾಲೋನಿ ಸ್ಲಂ, ಮಂಡ್ಯ ತಾಲ್ಲೂಕಿನ ಇಂಡುವಾಳು, ಯಲಿಯೂರು, ಶ್ರೀರಂಗಪಟ್ಟಣ ತಾಲ್ಲೂಕಿನ ಟಿ. ಎಂ.ಹೊಸೂರು ಮತ್ತು ಸಬ್ಬನಕುಪ್ಪೆ ಗ್ರಾಮಗಳನ್ನು ಭೇಟಿ ನೀಡಿ ಮಳೆ ಹಾನಿ ಕುರಿತು ಪರಿಶೀಲನೆ ನಡೆಸಿ, ಸಾರ್ವಜನಿಕರೊಂದಿಗೆ ಚರ್ಚಿಸಿದರು.
- KRS ಭರ್ತಿಗೆ 13 ಅಡಿ ಬಾಕಿ : 22 ಸಾವಿರ ಕ್ಯೂಸೆಕ್ ಒಳಹರಿವು- ಕೊಡಗಿನಲ್ಲಿ ಮುಂದುವರೆದ ವರುಣಾರ್ಭಟ
- K T S ಸೇರಿದಂತೆ ಇಂದು ಮೂರು ಮಂದಿ MLC ನಿವೃತ್ತಿ: ಪರಿಷತ್ ನಲ್ಲಿ ಬಿಜೆಪಿಗೆ ಬಹುಮತ
- ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ 31 ಪಿಎಸ್ಐ ವರ್ಗಾವಣೆ
- ಕೊಪ್ಪಳ ಬಳಿ ರೈಲಿಗೆ ತಲೆಕೊಟ್ಟು ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ
- ಈದ್ಗಾ ಮೈದಾನ- BBMP ಹೇಳಿಕೆ ಖಂಡಿಸಿ ಜು.12ಕ್ಕೆ ಬೆಂಗಳೂರಿನ ಚಾಮರಾಜಪೇಟೆ ಬಂದ್
- ಇಬ್ಬರು ಲಷ್ಕರ್ ಉಗ್ರರನ್ನು ಹಿಡಿದುಕೊಟ್ಟ ಜಮ್ಮು ಕಾಶ್ಮೀರದ ಗ್ರಾಮಸ್ಥರು-5 ಲಕ್ಷ ರು ಬಹುಮಾನ
More Stories
KRS ಭರ್ತಿಗೆ 13 ಅಡಿ ಬಾಕಿ : 22 ಸಾವಿರ ಕ್ಯೂಸೆಕ್ ಒಳಹರಿವು- ಕೊಡಗಿನಲ್ಲಿ ಮುಂದುವರೆದ ವರುಣಾರ್ಭಟ
K T S ಸೇರಿದಂತೆ ಇಂದು ಮೂರು ಮಂದಿ MLC ನಿವೃತ್ತಿ: ಪರಿಷತ್ ನಲ್ಲಿ ಬಿಜೆಪಿಗೆ ಬಹುಮತ
ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ 31 ಪಿಎಸ್ಐ ವರ್ಗಾವಣೆ