ಡಿ 22 – 27 ರಂದು 5762 ಗ್ರಾಪಂಗಳಿಗೆ ಚುನಾವಣೆ ನಿಗದಿ – ಇಂದಿನಿಂದ ನೀತಿ ಸಂಹಿತೆ – ಡಿ 30 ರಂದು ಫಲಿತಾಂಶ

Team Newsnap
1 Min Read

ಬ್ರೇಕಿಂಗ್ ನ್ಯೂಸ್!

  1. ರಾಜ್ಯದ 30 ಜಿಲ್ಲೆಗಳ ಗ್ರಾಮ ಪಂಚಾಯತಿ ಚುನಾವಣೆ
  2. 5762 ಗ್ರಾಮ ಪಂಚಾಯತಿ ಗೆ ಚುನಾವಣೆ
  3. 92121 ಸದಸ್ಯರಿಗೆ ಚುನಾವಣೆ ನಡೆಯಲಿದೆ
  4. ಮೊದಲ ಹಂತದ ಮತದಾನ ದಿನಾಂಕ 22.12.2020*
  5. ಎರಡನೇ ಹಂತದ ಮತದಾನ ದಿನಾಂಕ :27.12.2020
  6. ಮೊದಲ ಹಂತದಲ್ಲಿ 2,930 ಪಂಚಾಯತಿಗಳಿಗೆ ಚುನಾವಣೆ.
  7. 2ನೇ ಹಂತದಲ್ಲಿ 2832 ಪಂಚಾಯತಿಗಳಿಗೆ ಚುನಾವಣೆ.
  8. ಇಂದಿನಿಂದಲೇ ನೀತಿ ಸಂಹಿತೆ ಜಾರಿ.
  9. ಡಿಸೆಂಬರ್ 11 ರಂದು ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ.
  10. ನಾಮಪತ್ರ ಪರಿಶೀಲನೆಗೆ ಡಿಸೆಂಬರ್ 16 ಕೊನೆ ದಿನ.
  11. ಡಿಸೆಂಬರ್ 30ಕ್ಕೆ ಪಂಚಾಯತಿ ಚುನಾವಣೆ ಫಲಿತಾಂಶ.
voters

ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಡಿಸೆಂಬರ್ ಅಂತ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ.

113 ತಾಲ್ಲೂಕುಗಳಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದ ಚುನಾವಣೆ ಡಿ. 22ರಂದು ನಡೆಯಲಿದೆ. ಡಿ. 27ರಂದು ಉಳಿದ ತಾಲ್ಲೂಕುಗಳಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 7ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ.

ರಾಜ್ಯದ ಒಟ್ಟು 5,762 ಗ್ರಾಮ ಪಂಚಾಯಿತಿಗಳ 45128 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೆಲವು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ, ಡಿಸೆಂಬರ್ 11 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಡಿಸೆಂಬರ್ 14 ನಾಮಪತ್ರ ವಾಪಸ್‌ ಪಡೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದೆ.

Share This Article
Leave a comment