ಡಿಸೆಂಬರ್‌ನಿಂದ ಕೇಂದ್ರದ ಉಚಿತ ಅಕ್ಕಿ, ಬೇಳೆ ಇಲ್ಲ!

Team Newsnap
1 Min Read

ಕೇಂದ್ರ ಸರ್ಕಾರ ಬಡವರ ಆಹಾರ ಸಮಸ್ಯೆ ಅರಿತು ಗರೀಬ್‌ ಕಲ್ಯಾಣ್‌ ಯೋಜನೆಯಡಿ ಕಳೆದ ಏಳು ತಿಂಗಳಿನಿಂದ ಪಡಿತರ ಚೀಟಿದಾರರಿಗೆ ನೀಡುತ್ತಿದ್ದ ಉಚಿತ ಅಕ್ಕಿ, ಬೇಳೆ ಇಂದು ಅಂತ್ಯಗೊಳ್ಳಲಿದೆ.

ಕೊರೋನಾ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಪಡಿತರಚೀಟಿ ಹೊಂದಿರುವ ರಾಜ್ಯದ ಎಲ್ಲ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿ ಮತ್ತು ಕುಟುಂಬವೊಂದಕ್ಕೆ 1 ಕೆಜಿ ಕಡಲೆಕಾಳನ್ನು ಕೇಂದ್ರ ಸರ್ಕಾರ ಗರೀಬ್‌ ಕಲ್ಯಾಣ ಯೋಜನೆಯಡಿ ಹಂಚಿಕೆ ಮಾಡಿತ್ತು.

ಹಾಗಾಗಿ ರಾಜ್ಯದ ಪಡಿತರ ಚೀಟಿ ಫಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ ಮತ್ತು ಕುಟುಂಬವೊಂದಕ್ಕೆ ತಲಾ 2 ಕೆಜಿ ಗೋಧಿ, 1ಕೆಜಿ ಕಡಲೆಕಾಳು ಲಭ್ಯವಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರದ ಆದೇಶದಂತೆ ಈ ಯೋಜನೆ ನವೆಂಬರ್‌ ಅಂತ್ಯಕ್ಕೆ ಕೊನೆಗೊಳ್ಳಲಿದೆ.

ಕೋವಿಡ್‌-19 ಸಂಕಷ್ಟದ ಪರಿಸ್ಥಿತಿ ನಿರ್ವಹಿಸಲು ಕೇಂದ್ರ ಸರ್ಕಾರ ನವೆಂಬರ್‌ವರೆಗೂ ಉಚಿತ ಅಕ್ಕಿ, ಬೇಳೆಯನ್ನು ಗರೀಬ್‌ ಕಲ್ಯಾಣ್‌ ಯೋಜನೆಯಡಿ ವಿತರಿಸುವಂತೆ ಆದೇಶಿಸಿತ್ತು. ಇದೀಗ ನವೆಂಬರ್‌ ಮುಕ್ತಾಯದ ಹಂತದಲ್ಲಿದ್ದು ಉಚಿತ ಪಡಿತರ ಯೋಜನೆಯನ್ನು ಮುಂದುವರೆಸಬೇಕೇ? ಬೇಡವೇ? ಎಂಬುದವರ ಕುರಿತು ಇಲಾಖೆಗೆ ಯಾವುದೇ ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿಲ್ಲ.

ಹೀಗಾಗಿ ನವೆಂಬರ್‌ ಅಂತ್ಯಕ್ಕೆ ಯೋಜನೆ ಅಂತ್ಯಗೊಳ್ಳಲಿದ್ದು, ಡಿಸೆಂಬರ್‌ನಿಂದ ಅಂತ್ಯೋದಯ ಪಡಿತರ ಕಾರ್ಡು ಹೊಂದಿರುವ ಕುಟುಂಬಕ್ಕೆ 30 ಕೆಜಿ ಅಕ್ಕಿ 2 ಕೆಜಿ ಗೋಧಿ ಹಾಗೂ ಬಿಪಿಎಲ್‌ ಪಡಿತರ ಚೀಟಿ ಫಲಾನುವಿಗೆ ತಲಾ 5 ಕೆಜಿ ಅಕ್ಕಿ ಮತ್ತು ಕುಟುಂಬಕ್ಕೆ ಎರಡು ಕೆಜಿ ಗೋಧಿ ಸಿಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತೆ ಡಾ.ಶಮ್ಲಾ ಇಕ್ಬಾಲ್‌ ಅವರು ಮಾಹಿತಿ ನೀಡಿದ್ದಾರೆ.

Share This Article
Leave a comment