September 29, 2022

Newsnap Kannada

The World at your finger tips!

muraga

ಮುರುಘಾ ಮಠದ ಆಡಳಿತಾಧಿಕಾರಿ ಬಸವರಾಜನ್ ವಿರುದ್ದವೂ ರಶ್ಮಿಅತ್ಯಾಚಾರ ಕೇಸ್ ದಾಖಲು

Spread the love

ಚಿತ್ರದುರ್ಗದ ಮುರುಘಾ ಮಠದ ಡಾ.ಶಿವರಾತ್ರಿ ಶಿವಮೂರ್ತಿ ಸ್ವಾಮೀಜಿ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ.

ಮಾಜಿ ಶಾಸಕರೂ ಆದ ಬೃಹನ್ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ವಿರುದ್ಧ ವಾರ್ಡನ್ ರಶ್ಮಿ ಅತ್ಯಾಚಾರ ದೂರು ನೀಡಿದ್ದಾರೆ.

ಮುರುಘಾಮಠದ ಹಾಸ್ಟೆಲ್ ವಾರ್ಡನ್ ಆಗಿರುವ ರಶ್ಮಿ ಚಿತ್ರದುರ್ಗ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ ನಂತರ. IPC354(A),504,506,363, 120(B)ಅಡಿಯಲ್ಲಿ ದೂರು ದಾಖಲಾಗಿದೆ.

ಮೈಸೂರಿನಲ್ಲಿ ಮುರುಘಾ ಮಠದ ಸ್ವಾಮೀಜಿ ಮೇಲೆ ದಾಖಲಾದ ಕೇಸ್ ನಲ್ಲಿ ರಶ್ಮಿ 2 ನೇ ಆರೋಪಿಯಾಗಿದ್ದಾರೆ. ಮೈಸೂರಿನ ನಜರ್ ಬಾದ್ ಪೋಲಿಸ್ ಠಾಣೆ ಮುರುಘಾ ಶರಣರೂ ಸೇರಿ ಐವರ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ಕೂಡ ಈಗ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಮುರುಘಾ ಮಠಕ್ಕೆ ಬಸವರಾಜನ್ ಆಡಳಿತಾಧಿಕಾರಿ ಆದ ನಂತರದ ದಿನದಿಂದ ಮಕ್ಕಳ ಮೇಲೆ ಮತ್ತು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ರಶ್ಮಿ ಆರೋಪಿಸಿದ್ದಾರೆ.

error: Content is protected !!