November 16, 2024

Newsnap Kannada

The World at your finger tips!

MP , water , politics

ಮಳವಳ್ಳಿಯಲ್ಲಿ ಬಾಲಕಿಯ ಅತ್ಯಾಚಾರ- ಹತ್ಯೆ : ಗಲ್ಲುಶಿಕ್ಷೆ ನೀಡುವುದನ್ನು ಅಪ್ಪ, ಅಮ್ಮ ನೋಡಬೇಕು : ಸುಮಲತಾ

Spread the love

ಮಳವಳ್ಳಿಯಲ್ಲಿ ಅತ್ಯಾಚಾರ ಎಸಗಿ ಬಾಲಕಿಯನ್ನು ಹತ್ಯೆ ಮಾಡಿದ ಪಾಪಿಯನ್ನು ಗಲ್ಲಿಗೇರಿಸುವ ದೃಶ್ಯವನ್ನು ಬಾಲಕಿಯ ತಂದೆ -ತಾಯಿ ನೋಡುವಂತಾಗಬೇಕು ಮತ್ತು ಆ ಪಾಪಿ ಗರಿಷ್ಠ ಶಿಕ್ಷೆಯಿಂದ ನುಣುಚಿಕೊಳ್ಳದಂತೆ
ಕಾನೂನಿನ ಕುಣಿಕೆ ಹೆಣೆಯುವ ಪ್ರಯತ್ನ ಮಾಡಿಸುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಸಂತ್ರಸ್ತ ಬಾಲಕಿ ಕುಟುಂಬಸ್ಥರಿಗೆ ಭಾನುವಾರ ಸಂಜೆ ಭರವಸೆ ನೀಡಿದರು.

ಮಳವಳ್ಳಿ ಪಟ್ಟಣದಲ್ಲಿನ ಬಾಲಕಿಯ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪಾಪಿಗೆ ಗಲ್ಲು ಶಿಕ್ಷೆ ನೀಡುವುದು ಕಡಿಮೆಯೇ. ಇಂತಹ ನೀಚನ ಕೈಯನ್ನು ಕಟ್ಟಿಹಾಕಿ ತುಂಡು ತುಂಡಾಗಿ ಕತ್ತರಿಸಿ ಹಾಕಿದರೆ ನೆಮ್ಮದಿ ಎನಿಸುತ್ತೆ. ಆದರೆ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಹಾಗೆಲ್ಲಾ ಮಾಡಲು ಸಾಧ್ಯವಿಲ್ಲ.ಹಾಗಾಗಿ ಈ ಪಾಪಿಗೆ ಗಲ್ಲು ಶಿಕ್ಷೆ ಕೊಡಿಸಲು ಸೂಕ್ತ ಸಾಕ್ಷ್ಯಾಧಾರ ಕಲೆ ಹಾಕುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಒಬ್ಬ ಸಂಸದೆ ಎನ್ನುವುದಕ್ಕಿಂತ ನಾನು ಒಬ್ಬ ತಾಯಿಯಾಗಿ ಈ ಕೃತ್ಯವನ್ನು ಖಂಡಿಸುತ್ತೇನೆ. ಆರೋಪಿಯನ್ನು ನೇಣು ಹಾಕುವುದನ್ನು ಪೋಷಕರು ತಕ್ಷಣದಲ್ಲಿಯೇ ನೋಡುವಂತಾಗಬೇಕು. ಆರೋಪಿಗೆ ಪೋಕ್ಸೋ ಕಾಯ್ದೆಯಲ್ಲಿ ಕಾನೂನಿನಲ್ಲಿ ಬರುವ ಕಟ್ಟೆ ಕಡೆಯ ಶಿಕ್ಷೆಯನ್ನು ವಿಧಿಸಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಪ್ರಕರಣವನ್ನು ಸುಮ್ಮನೆ ಬಿಡುವುದಿಲ್ಲ, ಆರೋಪಿಗೆ ಶಿಕ್ಷೆಯಾಗುವವರೆಗೂ ಬಾಲಕಿಯ ಕುಟುಂಬದ ಜೊತೆ ನಿಲ್ಲುವುದಾಗಿ ತಿಳಿಸಿದರು.

ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸಂಸತ್ ನಲ್ಲಿ ಮಾತನಾಡಿ,ಇದಕ್ಕೆ ಕಡಿವಾಣ ಹಾಕಲು ಇನ್ನೂ ಕಠಿಣ ಶಿಕ್ಷೆ ವಿಧಿಸಲು ಕಾನೂನು ತರಲು ನಿರಂತರವಾಗಿ ಹೋರಾಟ
ನಡೆಸುವುದಾಗಿ ಭರವಸೆ ನೀಡಿದರು.

ಹೆಣ್ಣು ಮಕ್ಕಳು ಯಾರನ್ನು ನಂಬುವುದು ಎಂಬುವಂತಾಗಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ.
ಅವರಿಗೆ ರಕ್ಷಣೆ ಸಿಗಬೇಕಿದೆ ಎಂದು ಹೇಳಿದರು. ಬಾಡಿಗೆ ತಾಯ್ತತನ: ವಿಘ್ನೇಶ್ ,ನಯನಾತಾರಾ 6 ವರ್ಷದ ಹಿಂದೆಯೇ ರಿಜಿಸ್ಷ್ರಾರ್ ವಿವಾಹ – ವಿವಾದಕ್ಕೆ ತೆರೆ

10 ಲಕ್ಷ ಪರಿಹಾರ
ಬಾಲಕಿ ಕುಟುಂಬಕ್ಕೆ ಪರಿಹಾರ ಸಿಗಬೇಕೆಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಿಎಂ ನನ್ನ ಮನವಿಗೆ ಸ್ಪಂದಿಸಿ 10 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಹಣದಿಂದ ಬಾಲಕಿಯ ಕುಟುಂಬಸ್ಥರ ನೋವು ನೀಗಿಸಲು ಸಾಧ್ಯವಿಲ್ಲ. ಆದರೆ ಒಂದು ಸಣ್ಣ ಧೈರ್ಯ, ಆತ್ಮವಿಶ್ವಾಸ ಬಾಲಕಿಯ ಕುಟುಂಬಕ್ಕೆ ಸಿಗುತ್ತದೆ ಎಂದರು.

ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅದಷ್ಟೂ ಬೇಗ ಪ್ರಕರಣದ ವಿಚಾರಣೆ ನಡೆದು ಶಿಕ್ಷೆಯಾಗುವಂತೆ ತಿಳಿಸಲಾಗಿದೆ ಎಂದರು.

Copyright © All rights reserved Newsnap | Newsever by AF themes.
error: Content is protected !!