September 26, 2021

Newsnap Kannada

The World at your finger tips!

ಅತ್ಯಾಚಾರ ಪ್ರಕರಣ: ಮತ್ತೊಬ್ಬನ ಬಂಧನ

Spread the love

ಮೈಸೂರಿನಲ್ಲಿ ಆ. 24 ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈ ಘಟನೆಯಲ್ಲಿ ಆರು ಮಂದಿಯನ್ನು ಬಂಧಿಸಿದಂತಾಗಿದೆ.


ಕಳೆದ ಶನಿವಾರ ಐವರನ್ನು ಪೊಲೀಸರು ಬಂಧಿಸಿದ ವೇಳೆ ಒಬ್ಬ ಪರಾರಿಯಾಗಿದ್ದ. ತಮಿಳುನಾಡು ಪೊಲೀಸರ ನೆರವಿನೊಂದಿಗೆ ಮೈಸೂರು ಪೊಲೀಸರು ಭಾನುವಾರ ತಡರಾತ್ರಿ 6 ನೇ ಆರೋಪಿಯನ್ನು ಬಂಧಿಸಿದ್ದಾರೆ.


ಅತ್ಯಾಚಾರ ಘಟನೆಯಲ್ಲಿ ಆರು ಮಂದಿ ಇದ್ದರು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ಸೂದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರೆ, ಈ ಕೃತ್ಯದಲ್ಲಿ 7 ಮಂದಿ ಭಾಗಿಯಾಗಿದ್ವಿ ಎಂದು ಬಂಧಿತ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

error: Content is protected !!