ಕಾಂಗ್ರೆಸ್ ನ ಮಾಜಿ ಸಂಸದೆ, ನಟಿ ರಮ್ಯಾ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಪ್ರತಿಕ್ರಿಯೆ ನೀಡಿ ನಟಿ ರಮ್ಯಾ ಅಶಿಸ್ತು, ಉದ್ಧಟತನ ತೋರಿದ್ದಾರೆ ಎಂದು ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಪಕ್ಷದ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಟ್ವೀಟ್ ಮಾಡಿದ್ದು ಸರಿಯಲ್ಲ. ಹೀಗಾಗಿ ರಮ್ಯಾರವರನ್ನು ಕರೆದು ವಿವರಣೆ ಕೇಳುತ್ತೇವೆ ಎಂದರು.
ಇದನ್ನು ಓದಿ :100 ರು ಲಿಪ್‍ಸ್ಟಿಕ್‍ಗೆ ಆಸೆಗೆ 3 ಲಕ್ಷ ರು ಪಂಗನಾಮ – ಆನ್ ಲೈನ್ ವ್ಯವಹಾರದಲ್ಲಿ ನಡೆದ ಮೋಸ
ಮಹಮದ್ ನಲಪಾಡ್ ಅಥವಾ ನಾನಾಗಲಿ ಯಾರೇ ಪಕ್ಷದ ವಿರುದ್ಧ ನಡೆದರೆ ಅದು ಅಶಿಸ್ತು. ಸಂಸದರಾಗಿದ್ದವರು ಈ ರೀತಿ ಬಹಿರಂಗವಾಗಿ ಟ್ವೀಟ್ ಮಾಡಬಾರದಿತ್ತು. ಏನೇ ಸಮಸ್ಯೆಗಳಿದ್ದರೂ ಪಕ್ಷದ ವರಿಷ್ಠರು, ರಾಜ್ಯ ಉಸ್ತುವಾರಿಗಳ ಗಮನಕ್ಕೆ ತರಬಹುದಿತ್ತು. ಆದರೆ ಪಕ್ಷದ ಚೌಕಟ್ಟನ್ನು ಮೀರಬಾರದಿತ್ತು ಎಂದಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು