ಮತದಾನದ ದಿನ ಬೂತ್ ಮುಖ್ಯದ್ವಾರದಲ್ಲಿ ಮದ್ಯ ಪರೀಕ್ಷೆ ಯಂತ್ರವನ್ನು ಅಳವಡಿಸಿ

Team Newsnap
1 Min Read
Election to Tripura Legislative Assembly today - 13 percent voting ತ್ರಿಪುರಾ ವಿಧಾನ ಸಭೆಗೆ ಇಂದು ಚುನಾವಣೆ - ಶೇ 13 ರಷ್ಟು ಮತದಾನ

ಮತದಾನ ಕೇಂದ್ರದ ಪ್ರತಿ ಬೂತ್‍ನ ಮುಖ್ಯದ್ವಾರದಲ್ಲಿ BAC breathalyzer tester ಯಂತ್ರವನ್ನು ಅಳವಡಿಸುವ ಬಗ್ಗೆ ಚಂದ್ರಶೇಖರ್ ಬಿನ್ ಹಾಲಪ್ಪ ಅವರು ಮುಖ್ಯ ಚುನಾವಾಣಾಧಿಕಾರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?

ಮತದಾನದ ಕೇಂದ್ರದ ಪ್ರತಿ ಬೂತ್ ಪ್ರವೇಶದ್ವಾರದಲ್ಲಿ BAC breathalyzer tester ಯಂತ್ರವನ್ನು ಅಳವಡಿಸಬೇಕು. ಈ ಯಂತ್ರವು ಕಳೆದ 48 ಗಂಟೆಗಳಲ್ಲಿ ಮದ್ಯ ಸೇವಿಸಿದ ಬಗ್ಗೆ ದೃಢೀಕರಿಸುವಂತಿರಬೇಕು. 48 ಗಂಟೆಗಳಲ್ಲಿ(2ದಿನ) ಮದ್ಯ ಸೇವನೆ ಮಾಡಿ ಬಂದವರಿಗೆ ಮತದಾನ ಮಾಡದಂತೆ ಸರ್ಕಾರ ನಿರ್ಬಂಧಿಸಬೇಕು .

ಇದನ್ನು ಓದಿ : ರಾಜ್ಯದ ಜಿಪಂ – ತಾಪಂ ಚುನಾವಣೆಯ ಅರ್ಜಿ ಮೇ 17 ರಂದು ವಿಚಾರಣೆ : ಹೈಕೋರ್ಟ್

ಅತಿಮುಖ್ಯವಾಗಿ ಮತದಾನ ಮುಕ್ತಾಯದ ಹಿಂದಿನ 48 ಗಂಟೆ ಅವಧಿಯಲ್ಲಿ ಎಲ್ಲ ತರಹದ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್‍ಗಳಲ್ಲಿ ಮದ್ಯಮಾರಾಟವನ್ನು ಸಂಪೂರ್ಣ ನಿಷೇಧಿಸಬೇಕು. ಈ ಬಗ್ಗೆ ಆಯೋಗ ಕಟ್ಟು ನಿಟ್ಟು ಕ್ರಮ ಕೈಗೊಂಡರೂ ಸಹ ಅಕ್ರಮವಾಗಿ ಮದ್ಯ ಶೇಖರಿಸಿ ಕಳ್ಳಸಾಗಾಣೆ ಮೂಲಕ ಮತದಾರರಿಗೆ ಮದ್ಯವನ್ನು ಸರಬರಾಜು ಮಾಡುತ್ತಾರೆ. ಇದನ್ನು ತಡೆಗಟ್ಟಲು ಆಯೋಗ ಹೆಚ್ಚು-ಹೆಚ್ಚು ಪೋಲಿಸ್ ಸಿಬ್ಬಂದಿ ಅಧಿಕಾರಿಗಳನ್ನು ನೇಮಿಸುವ ಪರಿಸ್ಥಿತಿ ಇರುತ್ತದೆ.

ಕುಡಿದು ಗಲಾಟೆ ಮಡುವವರ ಸಂಖ್ಯೆ ನಿಯಂತ್ರಣವಾಗುತ್ತದೆ. ವಿವೇಚನೆಯಿಂದ ಮತವನ್ನು ಚಲಾಯಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಪ್ರತಿ ಕ್ಷೇತ್ರಗಳಲ್ಲಿ ಉತ್ತಮ ವ್ಯಕ್ತಿಗಳು ಆಯ್ಕೆಯಾಗುತ್ತಾರೆ. ಚುನಾವಣೆಗಳು ಭ್ರಷ್ಟಾಚಾರ ರಹಿತವಾಗಿ ನಡೆಯುತ್ತವೆ.

ಇದನ್ನು ಓದಿ : ಮೇ 19ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ

ಭಾರತ ಚುನವಣಾ ಆಯೋಗವು(ECI) ಭಾರತ ಸರ್ಕಾರದ ಕಾನೂನು ನ್ಯಾಯ ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದ, ಬಿಗಿಯಾದ ಕಾನೂನುಗಳನ್ನು ತರುವ ಮೂಲಕ ನನ್ನ ಅರ್ಜಿಯ ವಿಷಯಕ್ಕೆ ಸಂಬಂಧಿಸಿದಂತೆ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಆಯೋಗ ಈ ಅರ್ಜಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ 30 ದಿನಗಳ ಒಳಗಾಗಿ ಅರ್ಜಿದಾರಿಗೆ ಹಿಂಬರಹ ನೀಡುವಂತೆ ಕೇಳಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.

Share This Article
Leave a comment