ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ವಿದೇಶ ಪ್ರವಾಸದ ವಿರುದ್ಧ ದೂರು

Team Newsnap
1 Min Read

ಮಂಡ್ಯದಲ್ಲಿ ಹಿಜಾಬ್ ವಿವಾದದ ಸಂದರ್ಭದಲ್ಲಿ ಮುಖ್ಯ ವೇದಿಕೆಯಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿ ಮುಸ್ಕಾನ್ ವಿರುದ್ಧ ಬಲಪಂಥೀಯ ಗುಂಪುಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿವೆ.

ಸೌದಿ ಅರೇಬಿಯಾಗೆ ಭೇಟಿ ನೀಡಿರುವ ಮುಸ್ಕಾನ್ ಕುಟುಂಬ ಸದಸ್ಯರು ಅಲ್ಲಿ ಯಾವುದೋ ನಿಷೇಧಿಕ ಗುಂಪುಗಳನ್ನು ಭೇಟಿ ಮಾಡಿದ್ದಾರೆ. ಈ ಹಿನ್ನೆಲೆ ಅವರ ವಿದೇಶ ಪ್ರವಾಸದ ಕುರಿತು ವಿಚಾರಣೆ ನಡೆಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಮೆಕ್ಕಾ ಪ್ರವಾಸಕ್ಕೆ ತೆರಳಿದ ಮಂಡ್ಯದ ಮುಸ್ಕಾನ್ ಕುಟುಂಬ, ಮುಸ್ಕನ್ ಸೌದಿ ಅರೇಬಿಯಾ ಪ್ರವಾಸದ ಕುರಿತು ಕುಟುಂಬ ಸದಸ್ಯರು ಬೇರೆಯದ್ದೇ ಮಾತುಗಳನ್ನು ಹೇಳುತ್ತಿದ್ದಾರೆ. ಧಾರ್ಮಿಕ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಿರುವುದಾಗಿ ಆಕೆಯ ಕುಟುಂಬ ಹೇಳಿಕೊಂಡಿದೆ.

ಇದನ್ನು ಓದಿ :ಅಶಿಸ್ತು, ಉದ್ಧಟತನ ತೋರಿದ ರಮ್ಮಾ -ಆರ್.ಧ್ರುವನಾರಾಯಣ್

ಮದೀನಾದಿಂದ ಮುಸ್ಕಾನ್ ತಂದೆ ಹುಸೇನ್ ಸೆಲ್ಫಿ

ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ ಮತ್ತವರ ಕುಟುಂಬ ವಿದೇಶಕ್ಕೆ ಹಾರಿತ್ತು. ಮದೀನಾದಿಂದ ಅವರ ತಂದೆ ಹುಸೇನ್ ಸೆಲ್ಫಿ ವಿಡಿಯೋ ಹಂಚಿಕೊಂಡಿದ್ದರು. ರಂಜಾನ್ ಪ್ರಯುಕ್ತ ಕುಟುಂಬ ಸಮೇತ ಮುಸ್ಕಾನ್ ಕುಟುಂಬ ವಿದೇಶಕ್ಕೆ ತೆರಳಿದ್ದು, ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡದೆ ಇರುವುದು ಅನುಮಾನಗಳನ್ನು ಹುಟ್ಟು ಹಾಕಿತ್ತು.

ಪೊಲೀಸರು ಮುಸ್ಕಾನ್ ಮನೆ ಬಳಿ ತೆರಳಿ ವಿಚಾರಿಸಿದಾಗಲೇ, ಕುಟುಂಬ ಸಮೇತ ಅವರು ವಿದೇಶಕ್ಕೆ ತೆರಳಿದ ವಿಚಾರ ತಿಳಿದಿತ್ತು. ಇದರ ಮಧ್ಯೆ ಮೇ ತಿಂಗಳ ಅಂತ್ಯದಲ್ಲಿ ಮುಸ್ಕಾನ್ ಕುಟುಂಬ ವಿದೇಶದಿಂದ ವಾಪಸ್ ಆಗಲಿದ್ದು, ಬಂದ ತಕ್ಷಣವೇ ಪೋಲಿಸ್ ಠಾಣೆ ಬರಲು ಸೂಚನೆ ನೀಡಲಾಗಿದೆ ಎಂಬ ತಿಳಿದು ಬಂದಿದೆ.

Share This Article
Leave a comment