ನಕಲಿ ಐಎಎಸ್ ಅಧಿಕಾರಿ ಯೊಬ್ಬನನ್ನು ಕಗ್ಗಲೀಪುರ ಪೊಲೀಸರು ಇಂದು ಬಂಧಿಸಿದರು.
ಮಹಾರಾಷ್ಟ್ರ ಮೂಲದ ಶಶೀರ್(24) ಬಂಧಿತ. ಕಳೆದ ಮೂರು ವರ್ಷದಿಂದ ಕಗ್ಗಲಿಪುರದಲ್ಲೇ ವಾಸವಾಗಿದ್ದ ಶಶೀರ್, ಡಿಪ್ಲೊಮಾ ಓದಿ, ತಾನು ಐಎಎಸ್ ಅಧಿಕಾರಿ, ಮಿನಿಸ್ಟರಿ ಆಫ್ ಹೋಮ್ ಅಫೈರ್ನಲ್ಲಿ ಅಧಿಕಾರಿಯಾಗಿದ್ದೇನೆ ಎಂದು ಬಿಂಬಿಸಿಕೊಂಡಿದ್ದ.
ಸ್ಥಳೀಯ ಪೊಲೀಸರ ಬಳಿಯೂ ತಾನು ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದ ಈತ
ರವಿಶಂಕರ್ ಗುರೂಜಿ ಆಶ್ರಮಕ್ಕೂ ಭೇಟಿ ಕೊಟ್ಟಿದ್ದನು. ತಾನು ಐಎಎಸ್ ಅಧಿಕಾರಿಯೆಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಸಂಬಂಧಿಸಿದ ಜಮೀನು ವಿವಾದಕ್ಕೂ ಪ್ರವೇಶ ಮಾಡಿ ಗುರೂಜಿ ಪರ ಬ್ಯಾಟಿಂಗ್ ಮಾಡಿದ್ದ.
ರವಿಶಂಕರ್ ಗುರೂಜಿ ಆಶ್ರಮದ ಜಮೀನು ವಿವಾದದ ಪರಿಹಾರ ಮಾಡಿಕೊಡುವುದಾಗಿ ಹೇಳಿದ್ದ ಶಶೀರ್, ನಿಮ್ಮ ಜಮೀನು ವಿವಾದವನ್ನು ಬಗೆಹರಿಸಿಕೊಡುವುದಾಗಿ ಹೇಳಿದ್ದ.
ಶಶೀರ್ನ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ವಿಚಾರ ಮಾಡಿದಾಗ ಅಸಲಿಯತ್ತು ಬಯಲಾಗಿದೆ.
ಮಂಗಳವಾರ ರಾತ್ರಿ ನಕಲಿ ಐಎಎಸ್ ಅಧಿಕಾರಿಯನ್ನು ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ