ರಾಮನಗರ : ಐವರು ಮಕ್ಕಳು ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ರಸ್ತೆಯಲ್ಲೇ ಯಮನಂತೆ ಎಗರಿದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದರೆ, 3 ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ರಾಮನಗರದ ಲಕ್ಷ್ಮಿಪುರ ಗ್ರಾಮದ ಬಳಿ ಜರುಗಿದೆ.
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ರೋಹಿತ್ (5 ಶಾಲಿನಿ. (8) ಎಂಬ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಗೌತಮಿ (12) ಎಂಬ ಬಾಲಕಿ ಸ್ಥಿತಿ ಸಹ ಗಂಭೀರವಾಗಿದ್ದು ಆಕೆಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುಚಿತ್ ಮತ್ತು ಲೇಖನ ಎಂಬ ಮಕ್ಕಳಿಗೆ ಆದಿಚುಂಚನಗಿರಿಯ ರಾಮಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪಿಕಪ್ ಚಾಲಕನೋರ್ವನ ಬೇಜಬ್ದಾರಿತನ ಏನೂ ಅರಿಯದ ಇಬ್ಬರು ಮಕ್ಕಳ ಬಾಳನ್ನ ಬಲಿಪಡೆದಿದೆ.ಲೊ ಬ್ಲಡ್ ಪ್ರೆಷರ್ ಮುನ್ನೆಚ್ಚರಿಕೆ ಕ್ರಮಗಳು | Low Blood Pressure
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರಾಮನಗರ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಎಎಸ್ಪಿ ಸುರೇಶ್ ಘಟನೆ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ಮಕ್ಕಳ ಪರಿಸ್ಥಿಯನ್ನು ಕಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು