ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತವರು ಜಿಲ್ಲೆಯಲ್ಲೇ ಕೈ ನಾಯಕನೊಬ್ಬ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ನಂಗನಾಚ್ ಡ್ಯಾನ್ಸ್ ವೀಡಿಯೋ ವೈರಲ್ ಆಗಿ ಜನರ ಟೀಕೆಗೆ ಗುರಿಯಾಗಿದೆ .
ರಾಮನಗರ ನಗರಸಭೆಯ 19ನೇ ವಾರ್ಡ್ ನ ಸದಸ್ಯ ದೌಲತ್ ಷರೀಫ್ ತಮ್ಮ ಬರ್ತಡೇ ಪಾರ್ಟಿಯನ್ನು ನಂಗನಾಚ್ ಮೂಲಕ ಆಚರಿಸಿಕೊಂಡರು.ಅರೆನಗ್ನವಾಗಿ ಯುವತಿಯರು ಕುಣಿಯುತ್ತಾ ನಂಗನಾಚ್ ನೃತ್ಯ ಮಾಡುತ್ತಿದ್ದರೇ, ದೌಲತ್ ಬೆಂಬಲಿಗರು ಹುಚ್ಚೆದ್ದು ಕುಣಿದು, ದುಡ್ಡಿನ ಸುರಿಮಳೆಯನ್ನೇ ಮಾಡಿದ್ದಾರೆ ಎನ್ನಲಾಗಿದೆ.
ರಾಮನಗರದ ಯಾರಬ್ ನಗರದಲ್ಲಿನ ಕಲ್ಯಾಣ ಮಂಟಪದಲ್ಲಿ ತಮ್ಮ ಕಾರ್ಯಕರ್ತರು, ಬೆಂಬಲಿಗರೊಂದಿಗೆ ನಗರ ಸಭೆಯ ಕಾಂಗ್ರೆಸ್ ಸದಸ್ಯ ದೌಲತ್ ಷರೀಫ್ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ಹುಟ್ಟು ಹಬ್ಬಕ್ಕೆ ಅರೆಬರೆ ಯುವತಿಯ ನೃತ್ಯವನ್ನು ಆಯೋಜಿಸಲಾಗಿತ್ತು ಎನ್ನಲಾಗಿದೆ.
More Stories
ಅರಣ್ಯ ಪ್ರದೇಶದಲ್ಲಿ ಪಾರ್ಟಿ – ಪ್ರಶ್ನಿಸಿದ ಪೊಲೀಸರ ಮೇಲೆಯೇ ರೌಡಿಶೀಟರ್ಗಳ ಹಲ್ಲೆ
ರಾಮನಗರ: ಹಾಸ್ಟೆಲ್ನಲ್ಲೇ ನರ್ಸಿಂಗ್ ವಿದ್ಯಾರ್ಥಿನಿಯ ಆತ್ಮಹತ್ಯೆ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು