ರಾಮನಗರ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಗೆಲುವು ಸಾಧಿಸಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರಿದರೂ, ಜನರು ಯೋಗೇಶ್ವರ್ ಕೈ ಹಿಡಿದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುನ್ನಡೆಯ ತಿರುವು:
ಮೊದಲ ಆರು ಸುತ್ತುಗಳಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆಯಲ್ಲಿದ್ದರು. ಆದರೆ, ಚನ್ನಪಟ್ಟಣ ನಗರದ ಇವಿಎಂ ತೆರೆಯುತ್ತಿದ್ದಂತೆಯೇ ಯೋಗೇಶ್ವರ್ ಭಾರೀ ಮುನ್ನಡೆ ಗಳಿಸಿದರು ಮತ್ತು ಅದನ್ನು ಕೊನೆವರೆಗೂ ಕಾಪಾಡಿಕೊಂಡು ಜಯ ಸಾಧಿಸಿದರು.
ಯೋಗೇಶ್ವರ್ ಗೆಲ್ಲಲು ಕಾರಣಗಳು:
ಯೋಗೇಶ್ವರ್ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಈ ಬಾರಿ, ಈ ಅನುಕಂಪ ಮತ್ತು ಬೆಂಬಲ ಮತಗಳಲ್ಲಿ ಸ್ಪಷ್ಟವಾಗಿ ಕಣ್ಣಿಗೆ ಬಿದ್ದಿತು. ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಚುನಾವಣೆಗೆ ಮೊದಲೇ ಜನತಾ ದರ್ಶನ ನಡೆಸಿ ಕ್ಷೇತ್ರದಲ್ಲಿ ಸಕ್ರಿಯ ಪ್ರಚಾರ ನಡೆಸಿದ್ದರು.
ಕಳೆದ ಚುನಾವಣೆಯಲ್ಲಿ ಯೋಗೇಶ್ವರ್‌ಗೆ ಸಿಕ್ಕಿಲ್ಲದ ಅಲ್ಪಸಂಖ್ಯಾತ ಮತಗಳು ಈ ಬಾರಿ ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ಕಡೆ ತಿರುಗಿದವು. ಚನ್ನಪಟ್ಟಣ ಕೆರೆಗೆ ನೀರು ತುಂಬಿಸುವ ಮೂಲಕ ಯೋಗೇಶ್ವರ್ ಜನತೆಯ ಮೆಚ್ಚುಗೆ ಗಳಿಸಿದ್ದು, ಈ ಮೂಲಕ ಮತದಾರರನ್ನು ಆಕರ್ಷಿಸಿದರು.ಇದನ್ನು ಓದಿ –ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
ಸಚಿವ ಜಮೀರ್ ಅಹಮದ್ ಅವರ ವಿವಾದಾತ್ಮಕ ಹೇಳಿಕೆಗಳು ಕಾಂಗ್ರೆಸ್‌ಗೆ ಹೆಚ್ಚು ಹಾನಿ ಮಾಡದಿದ್ದರೂ, ಯೋಗೇಶ್ವರ್ ಅವರ ಅಭಿವೃದ್ಧಿ ಕೇಂದ್ರಿತ ಇಮೇಜ್ ಮತ್ತು ಜನಸಂಪರ್ಕವು ಗೆಲುವಿನ ಪ್ರಮುಖ ಕಾರಣವಾಗಿವೆ.
More Stories
ಮೈಸೂರಿನಲ್ಲಿ ಚಲಿಸುತ್ತಿದ್ದ KSRTC ಬಸ್ಗೆ ಬೆಂಕಿ: 50 ಕ್ಕೂ ಹೆಚ್ಚು ಪ್ರಯಾಣಿಕರು ರಕ್ಷಣೆ
ಪಿ.ವಿ ಸಿಂಧು ಡಿ.22 ರಂದು ಹಸೆಮಣೆ ಏರಲಿದ್ದಾರೆ
ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ವಿವರ, ವೇತನ ಮತ್ತು ಅರ್ಜಿ ದಿನಾಂಕ