ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಿ ಮೋದಿ : ಬಿಎಸ್‍ವೈ

Team Newsnap
1 Min Read
Prime Minister Modi to inaugurate Shimoga Airport: BSYಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಿ ಮೋದಿ : ಬಿಎಸ್‍ವೈ

ಜನವರಿ ಅಂತ್ಯಕ್ಕೆ ಅಥವಾ ಫೆಬ್ರವರಿ ಮೊದಲನೇ ವಾರದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

ಶಿವಮೊಗ್ಗದ ಸೋಗಾನೆ ಸಮೀಪ ನಿರ್ಮಾಣದ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಬಿಎಸ್ ವೈ ವಿಮಾನ ನಿಲ್ದಾಣದ ರನ್ ವೇ ಕಾಮಗಾರಿ 3,110 ಅಡಿ ಉದ್ದ, ಅಗಲ 45 ಮೀ. ಇದೆ. ಇದು ರಾಜ್ಯದಲ್ಲೇ ಎರಡನೇ ಅತಿ ಉದ್ದದ ರನ್ ವೇ ಆಗಿದೆ ಎಂದು ಹೇಳಿದರು.ರಾಮನಗರ: ಕಾಂಗ್ರೆಸ್ ನಾಯಕನ ಹುಟ್ಟು ಹಬ್ಬ- ನಂಗನಾಚ್ , ಅರೆಬೆತ್ತಲೆ ಕುಣಿತ, ದುಡ್ಡಿನ ಸುರಿಮಳೆ

ಅತಿ ಕಡಿಮೆ ಅವಧಿಯಲ್ಲಿ ಬಹಳ ವೇಗವಾಗಿ ವಿಮಾನ ನಿಲ್ದಾಣ ಕಾಮಗಾರಿ ನಡೆದಿದೆ. ವಿಮಾನ ನಿಲ್ದಾಣ ಕಾಮಗಾರಿಗೆ ಭೂಮಿ ನೀಡಿದ ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಮಾನ ಹಾರಾಟ ಆರಂಭದ ನಂತರ ಪ್ರವಾಸೋದ್ಯಮ ಹಾಗೂ ವಾಣಿಜ್ಯ ವ್ಯಾಪಾರಕ್ಕೂ ಅನುಕೂಲ ಆಗಲಿದೆ ಎಂದರು.

Share This Article
Leave a comment