February 24, 2026

Newsnap Kannada

The World at your finger tips!

leela govind raj

ಕೊರೊನಾ ಮರಣ ಮೃದಂಗ: ಫಲಿತಾಂಶ ಬರೋ ಮುನ್ನವೇ ರಾಮನಗರ ಕಾಂಗ್ರೆಸ್ ಅಭ್ಯರ್ಥಿ ಸಾವು

Spread the love

ರಾಮನಗರ ನಗರಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್​​ ಅಭ್ಯರ್ಥಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಲೀಲಾ ಗೋವಿಂದರಾಜ್ ( 42) ನಗರಸಭೆ ಚುನಾವಣೆಯಲ್ಲಿ 4ನೇ ವಾರ್ಡ್ ನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.

ನಾಲ್ಕು ದಿನ ಪ್ರಚಾರ ನಡೆಸಿದ್ದ ಲೀಲಾಗೆ ಕೊರೊನಾ ಸೋಂಕು ದೃಢವಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದರು.

ಏಪ್ರಿಲ್ 27 ರಂದು ನಗರಸಭೆ ಚುನಾವಣೆಯ ಮತದಾನ ನಡೆದಿತ್ತು. ನಾಳೆ ಚುನಾವಣೆಯ ಮತ ಏಣಿಕೆ ಕಾರ್ಯ ನಡೆಯಲಿದೆ. ಫಲಿತಾಂಶದ ಮುನ್ನ ವೇ ಅಭ್ಯರ್ಥಿ ಸಾವನ್ನಪ್ಪಿದ್ದಾರೆ.

error: Content is protected !!