ವರಹನಾಥ ಕಲ್ಲಹಳ್ಳಿ ಕ್ಷೇತ್ರದಲ್ಲಿ ವೆಂಕಟೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ

Team Newsnap
1 Min Read

ಕೆ ಅರ್ ಪೇಟೆ ತಾಲ್ಲೂಕಿನ ವರಹನಾಥ ಕಲ್ಲಹಳ್ಳಿಯ ಭೂವರಹನಾಥ ಕ್ಷೇತ್ರದಲ್ಲಿ ಶ್ರೀದೇವಿಭೂದೇವಿ ಸಮೇತನಾದ ವೆಂಕಟೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳ ಪ್ರತಿಷ್ಠಾಪನಾ ಮಹೋತ್ಸವ ಜರುಗಿತು.

ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳು

venki god

ಜನತಾಕರ್ಫ್ಯೂ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸೀಮಿತವಾಗಿ ಸರಳವಾಗಿ ನಡೆದ ವಿಗ್ರಹಗಳ ಪ್ರತಿಷ್ಠಾಪನಾ ಕಾರ್ಯಕ್ರಮ..

ಕೊರೋನಾ 2ನೇ ಅಲೆಯ ಭೀಕರತೆಯು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಮಹಾಮಾರಿಯ ನಿರ್ಮೂಲನೆಗಾಗಿ ನಡೆದ ಶತಕೋಟಿ ಜಪ ಯಜ್ಞ..

ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸರಾಘವನ್ ದಂಪತಿಗಳ ನೇತೃತ್ವದಲ್ಲಿ ನಡೆದ ಶ್ರೀವೆಂಕಟೇಶ್ವರ ದೇವಸ್ಥಾನದ ಕಳಸಪೂಜಾ ಕಾರ್ಯಕ್ರಮ..

god

ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಉತ್ಸವಮೂರ್ತಿಗಳ ಅಭಿಷೇಕ ಮತ್ತು ಪೂಜಾ ಕಾರ್ಯಕ್ರಮ..

ದೇವಕಿ ನಾರಾಯಣಗೌಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಗಂಜಿಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಅಶ್ವಿನಿಕೃಷ್ಣಪ್ಪ, ಬಲ್ಲೇನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಚೇತನಾ ಬೋರೇಗೌಡ, ಉಪಾಧ್ಯಕ್ಷ ನಂದೀಶ್, ರಾಜ್ಯ ಬಿಜೆಪಿ ಮುಖಂಡ ಕೆ.ಆರ್.ಹೇಮಂತಕುಮಾರ್, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ವಕೀಲ ನಾಗೇಶ್ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಭಾಗಿ..

ಭಾರಿ ಬಿಗಿ ಭದ್ರತೆ ಹಾಗೂ ಕೋವಿಡ್ ಮುನ್ಸೂಚನಾ ಕ್ರಮಗಳನ್ನು ಅನುಸರಿಸಿ ನಡೆದ ಪೂಜಾ ಕಾರ್ಯಕ್ರಮ.

Share This Article
Leave a comment