ರಾಜ್ಯೋತ್ಸವ ಎಂದರೆ ಕನ್ನಡ ಭಾಷೆ, ಕನ್ನಡಿಗರಿಗೆ ಮಾಸ ಪೂರ್ತಿ ಹಬ್ಬದ ಸಂಭ್ರಮ

Team Newsnap
2 Min Read

ಮೈಸೂರು ರಾಜ್ಯ ಎಂದಿದ್ದ ರಾಜ್ಯದ ಹೆಸರನ್ನು 1973 ರ ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ರಾಜ್ಯಗಳ ವಿಂಗಡನೆ ಮತ್ತು ಏಕೀಕರಣ ಗೊಂಡ 66 ನೇ ವರ್ಷ ಕಾಲಿಟ್ಟು ಐಕ್ಯತೆ ಮತ್ತು ಏಕತೆಯ ಸಂಕೇತವೂ ಆಗಿದೆ.

ಕನ್ನಡ ಭಾಷೆ ಅತ್ಯಂತ ಪ್ರಾಚೀನವಾಗಿದೆ. ಸುಮಾರು 2500‌ ಹಿಂದಿನ‌ ಭಾಷೆ ಕನ್ನಡಕ್ಕೆ ವಿಶ್ವ ಮನ್ನಣೆ ಉಂಟು. ಸಾಹಿತ್ಯ , ಸಂಸ್ಕೃತಿ, ಕಲೆ ರಂಗಭೂಮಿ, ನಾಟಕ, ಶಿಕ್ಷಣ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ಕನ್ನಡ ಭಾಷೆ ಅಗ್ರಗಣ್ಯವಾಗಿದೆ.

ಕನ್ನಡ ಭಾಷಾ ಸಾಹಿತ್ಯಕ್ಕೆ 8 ಜ್ಙಾನ ಪೀಠ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ . ಇದು ಭಾಷೆಯ ಪ್ರಬುದ್ದತೆಯನ್ನು ಎತ್ತಿ ತೋರಿಸುತ್ತದೆ. ಭಾಷೆಯ ಜೀವಂತಿಕೆಗೂ ಈ ಜ್ಙಾನ ಪೀಠಗಳು ಸಾಕ್ಷಿಯಾಗಿವೆ.

ಕನ್ನಡ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾವಣೆ ಮಾಡುವ ಹಾಗೂ ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ , ಬೆಳೆಸುವ ಹೊಣೆ ಎಲ್ಲರ ಮೇಲಿದೆ.

ಕನ್ನಡಿಗರಲ್ಲಿ ಭಾಷಾ ಅಭಿಮಾನದ ಕೊರತೆ ಎದ್ದು ಕಾಣುತ್ತದೆ ಎಂ‌ಬ ಅಪವಾದ ಕೂಗು ಅಕ್ಷರಶಃ ನಿಜ. ಭಾಷೆಯನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ಗ್ರಾಮೀಣ ಭಾಗದ ಕನ್ನಡಿಗರಿಗೆ ‌ಮಾತ್ರ ಸೀಮಿತ ಎಂಬಂತಾಗಿದೆ

ರಾಜಧಾನಿ ಬೆಂಗಳೂರು ಮತ್ತು ರಾಜ್ಯದ ಗಡಿ ಭಾಗದ ಜಿಲ್ಲೆಗಳಲ್ಲಿ ಕನ್ನಡ ಭಾಷೆಯ ಸೊಗಡು ಕ್ಷೀಣವಾಗುತ್ತಿದೆ. ಕನ್ನಡಿಗರ ಅತಿಯಾದ ಔದಾರ್ಯ ಮತ್ತು ಹೃದಯವಂತಿಕೆಗಳೂ ಕೂಡ ಭಾಷೆ ಸಮೃದ್ಧತೆಗೆ ಮಾರಕವಾಗಿದೆ. ನಾವು ಕನ್ನಡಕ್ಕಿಂತ ಇತರ ಭಾಷೆ ಕಲಿಯಲು ತೋರುವ ಆಸಕ್ತಿ, ಔದಾರ್ಯಗಳು ಅನ್ಯ ಭಾಷಿಗರಿಗೆ ವರವಾಗಿ ಪರಿಣಮಿಸಿದೆ.

ಕನ್ನಡಕ್ಕೆ ಹೀಗೆ ಇರಬೇಕು ಎಂಬ ಹಮ್ಮು ಬಿಮ್ಮು ಇಲ್ಲ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ನಾವು ಮಾತನಾಡುವ ಕನ್ನಡದಲ್ಲಿನ ತರಹವೇ ವಾರಿ ಪದಗಳು. ಕನ್ನಡ ಮಾತನಾಡುವ ಕನ್ನಡಿಗರಲ್ಲೂ ಭಿನ್ನತೆ ಇದೆ. ಅದರಲ್ಲೂ ಭಾಷಾ ಭಿನ್ನತೆ ಇದೆ. ಅಂದರೆ ಒಂದೊಂದು ಮನೆಯ ಹೊಸ್ತಿಲ ಒಳಗೂ ಕನ್ನಡದ ಕಂಪು ಬೇರೆ. ಅದೇ ಕನ್ನಡದ ವೈಶಿಷ್ಟ್ಯ ವಾಗಿದೆ.

ಏಕೀಕರಣಕ್ಕೂ ಮೊದಲು ಕರ್ನಾಟಕ ಹರಿದು ಹಂಚಿ ಹೋಗಿತ್ತು. ಭಾ಼ಷಾವಾರು ಪ್ರಾಂತ್ಯದ ರಚನೆ ನಂತರ ಕರ್ನಾಟಕ ಮತ್ತೆ ಒಂದಾಗಿ ಮನೆ, ಮನಗಳಲ್ಲಿ ಕನ್ನಡ ಬೆಳಗುವಂತೆ ಮಾಡಿದೆ. ಆದರೆ ಆಡಳಿತ ಭಾಷೆ ಕನ್ನಡ ಪರಿಪೂರ್ಣವಾಗಿ ಅನುಷ್ಠಾನ‌ಗೊಂಡಿಲ್ಲ. ಪ್ರಾಥಮಿಕ ಹಂತದಲ್ಲೇ ಮಾತೃಭಾಷಾ ಶಿಕ್ಷಣಕ್ಕೆ ಇದುವೆರೆಗೂ ಆದ್ಯತೆ ನೀಡದೇ ಇರುವುದರಿಂದ ಆಂಗ್ಲ ಭಾ಼ಷಾ ವ್ಯಾಮೋಹ ಹೋಗಿಲ್ಲ. ಕನ್ನಡದ ಕಲಿಕೆ ಎಂದರೆ ಗ್ರಾಮೀಣ ಭಾಗದ ಜನರಿಗೆ ಮೀಸಲು , ನಗರವಾಸಿಗಳಿಗೆ ಇಂಗ್ಲಿಷ್ ಅನಿವಾರ್ಯ ಎಂಬ ವಾತಾವರಣವನ್ನು ಸರ್ಕಾರವೇ ಸೃಷ್ಟಿ ಮಾಡಿದೆ.

ಕನ್ನಡದ ಬಗ್ಗೆ ಅಸಡ್ಡೆ ತೋರುವವರ ಸಂಖ್ಯೆಯೂ ಹೆಚ್ಚಾಗಿದೆ. ಕನ್ನಡ ಮಾತನಾಡಿದರೆ, ಓದಿದರೆ ಎಲ್ಲಿ ಮರ್ಯಾದೆಗೆ ಕುಂದು ಬರುತ್ತದೆ ‌ಎಂದು ಸಿನಿಕತನ ತೋರುವವರೂ ಇದ್ದಾರೆ.

Share This Article
Leave a comment