ಬೆಂಗಳೂರಿನ ಮಹಾದೇವಪುರದಲ್ಲಿ ರಾಜಕಾಲುವೆ ಒತ್ತುವರಿ – 8 ಕಡೆ ಜೆಸಿಬಿ ಆಪರೇಷನ್ ಆರಂಭ

Team Newsnap
1 Min Read

ಬೆಂಗಳೂರಿನ ಮಹಾದೇವಪುರದಲ್ಲಿ ಇತ್ತೀಚೆಗೆ ಭಾರೀ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಉಂಟಾಗಿತ್ತು. ಈ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವಿಗೆ ಸೋಮವಾರ ಕಾರ್ಯಾಚರಣೆ ಆರಂಭಿಸಿದರು.

ಮುನೇನಕೊಳಲು, ಚಿನ್ನಪ್ಪನಹಳ್ಳಿ, ಚಳ್ಳಗಟ್ಟ, ಬಸವಣನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗಿದೆ.

4 ಪ್ರಮುಖ ಭಾಗಗಳಲ್ಲಿ ಮೊದಲ ಹಂತದ ಆಪರೇಷನ್ ಪ್ರಾರಂಭವಾಗಿದ್ದು, ಈ ಭಾಗದ ರಾಜಕಾಲುವೆ ಒತ್ತುವರಿದಾರರಿಗೆ ಬುಲ್ಡೋಜರ್ ಶಾಕ್ ನೀಡಲು ಬಿಬಿಎಂಪಿ ಮುಂದಾಗಿದೆ.

ಪೋಕ್ಸೋ ಪ್ರಕರಣ : ಮುರುಘಾ ಸ್ವಾಮಿಯ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಕಂದಾಯ ಇಲಾಖೆಯ ಸರ್ವೆ ವರದಿಯಲ್ಲಿ ಮಳೆ ಹಾನಿಗೆ ಈ ಅಪಾರ್ಟ್ಮೆಂಟ್‌ಗಳೇ ಕಾರಣ ಎಂಬುದು ತಿಳಿದುಬಂದಿತ್ತು. 145 ಅಪಾರ್ಟ್ಮೆಂಟ್‌ಗಳಿಂದ ರಾಜಕಾಲುವೆ ಹಾಗೂ ಸಬ್ ಕಾಲುವೆಗಳ ಒತ್ತುವರಿಯಾಗಿತ್ತು. ಹಲವೆಡೆ ಕಾಂಪೌಂಡ್, ರಸ್ತೆ, ಮನೆ, ಪಾರ್ಟ್ಮೆಂಟ್‌ಗಳ ನಿರ್ಮಾಣ ಮಾಡಿಕೊಂಡು ಒತ್ತುವರಿ ಮಾಡಲಾಗಿದೆ. ಇಂದು 8ಕ್ಕೂ ಹೆಚ್ಚು ಕಡೆಗಳಲ್ಲಿ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗಿದೆ.

Share This Article
Leave a comment