March 31, 2023

Newsnap Kannada

The World at your finger tips!

WhatsApp Image 2022 09 12 at 3.27.49 PM

PSI ನೇಮಕಾತಿಗೆ 15 ಲಕ್ಷ ಲಂಚ ಪಡೆದ ಬಿಜೆಪಿ ಶಾಸಕ ಕಾಂಗ್ರೆಸ್ ನಿಂದ ವಿಡಿಯೋ ಬಿಡುಗಡೆ

Spread the love

PSI ನೇಮಕಾತಿ ಹುದ್ದೆಗಾಗಿ ಕನಕಗಿರಿ ಬಿಜೆಪಿ ಶಾಸಕ 15 ಲಕ್ಷ ರು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸೋಮವಾರ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ವಿಡಿಯೋ ಬಿಡುಗಡೆ ಮಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ, ಪಿಎಸ್‌ಐ ನೇಮಕಾತಿಗಾಗಿ ಶಾಸಕ ಬಸವರಾಜ್ ದಡೆಸೂಗುರು ಅಭ್ಯರ್ಥಿಯ ತಂದೆಯಿಂದ 15 ಲಕ್ಷ ಹಣ ಪಡೆದಿರುವ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವುದಾಗಿ ಹೇಳಿದರು.

ಈ ವೇಳೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸೆ.5ರಂದು ಶಾಸಕ ದಡೇಸೂಗುರು ಹಾಗೂ ಪಿಎಸ್‌ಐ ಅಭ್ಯರ್ಥಿಯ ತಂದೆ ಪರಸಪ್ಪ ಅವರ ಆಡಿಯೋ ವೈರಲ್ ಆಗಿತ್ತು. ಬಳಿಕ ಸೆ.6ರಂದು ಶಾಸಕರು ವೈರಲ್ ಆದ ಆಡಿಯೋ ನನ್ನದೇ ಎಂದು ಸ್ಪಷ್ಟೀಕರಣ ನೀಡಿದ್ದರು.

ಪೋಕ್ಸೋ ಪ್ರಕರಣ : ಮುರುಘಾ ಸ್ವಾಮಿಯ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಈ ಘಟನೆ ನಡೆದು 1 ವಾರವಾದರೂ ಸರ್ಕಾರ ಇನ್ನೂ ಶಾಸಕರ ವಿರುದ್ಧ ಕ್ರಮ ಕೈಗೊಂಡಿಲ್ಲ. ಬಳಿಕ ಮಾತನಾಡಿದ್ದ ಶಾಸಕರೇ ನಾನವನಲ್ಲ ಎಂದು ಹೇಳಿದ್ದರು. ಈಗ ಶಾಸಕರು ಹಣ ಪಡೆದ ಬಗ್ಗೆ ವಿಡಿಯೋ ಬಿಡುಗಡೆ ಮಾಡಲಾಗಿದೆ. ಶಾಸಕರ ಭವನದಲ್ಲಿಯೇ ಕುಳಿತು ಪರಸಪ್ಪ ಅವರಿಂದ ಶಾಸಕರು ಹಣ ಪಡೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

error: Content is protected !!