ನ್ಯೂಸ್ ಸ್ನ್ಯಾಪ್
ಬೆಂಗಳೂರು
ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ನಿವಾಸದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲದೇ ನಟಿ ರಾಗಿಣಿ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಲಾಗಿದೆ ಎಂದು ಪೊಲೀಸ್ ಕಮೀಷನರ್ ಕಮಲ್ ಪಂಥ್ ಶುಕ್ರವಾರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ರಾಗಿಣಿ ಮನೆ ಮೇಲೆ ದಾಳಿಗೂ ಮುನ್ನ ನಾವು ಕೇಸು ದಾಖಲಿಸಿಕೊಂಡು ನ್ಯಾಯಾಲಯದ ಮೂಲಕ ಸರ್ಚ ವಾರೆಂಟ್ಪ ಡೆದುಕೊಂಡು ದಾಳಿ ಮಾಡಿದ್ದೇವೆ. ಹೇಳಿಕೊಳ್ಳುವಂತಹ ಮಹತ್ವ ವಸ್ತುಗಳು ಲಭ್ಯವಾಗಿಲ್ಲ. ಕಂಪ್ಯೂಟರ್, ಲ್ಯಾಪ್ ಟಾ, ಹಾರ್ಡ ಡಿಸ್ಕಗಳನ್ನು ಮಾತ್ರ ಸೀಜ್ ಮಾಡಲಾಗಿದೆ.
ಈಗಾಗಲೇ ರವಿಶಂಕರ್ ಹಾಗೂ ರಾಹುಲ್ ಶೆಟ್ಟಿ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಉಳಿದಂತೆ ಎಲ್ಲವೂ ತನಿಖೆಯ ಹಂತದಲ್ಲಿರುವುದರಿಂದ ಈ ಕುರಿತಂತೆ ನಿಮ್ಮ ಊಹಾಪೋಹ ಪ್ರಶ್ನೆಗಳಿಗೆ ಉತ್ತರಿಸುವ ಕಾಲ ಇದಲ್ಲ. ಮುಂದೆ ತನಿಖೆ ಪೂರ್ಣವಾಗುತ್ತದೆ ಎಲ್ಲವನ್ನೂ ಬಹಿರಂಗ ಮಾಡುತ್ತೇವೆ. ತನಿಖೆಯ ದೃಷ್ಠಿಯಿಂದ ನಾವು ಗೌಪ್ಯತೆ ಕಾಡುತ್ತೇವೆ. ನೀವು ಕಾಯಬೇಕು ಎಂದು ಪ್ರಶ್ನೆಯೊಂದಕ್ಕೆ ಹೇಳಿದರು. ಆರೋಪಿಗಳ ಇಬ್ಬರ ವಿಚಾರಣೆಯೂ ತ್ವರಿತ ಗತಿಯಲ್ಲಿ ನಡೆದಿದೆ. ಮೊಬೈಲ್ ನಲ್ಲಿ ಸಾಕಷ್ಟು ಮಾಹಿತಿಗಳು ಲಭ್ಯವಾಗಿವೆ. ಚಿತ್ರರಂಗದ ಕೆಲವರ ನಂಟು ಆರೋಪಿಗಳಿಗೆ ಇದೆ. ಮುಂದಿನ ವಿಚಾರಣೆ ನಡೆಯಬೇಕಿದೆ. ಕೆಲವರು ಪಾರ್ಟಿಗಳಿಗೆ ಹೋಗುತ್ತಿದ್ದರು ಹಾಗೂ ಅಲ್ಲಿ ಡ್ರಗ್ಸ್ ಬಳಕೆ ಮಾಡುತ್ತಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ ಎಂದಷ್ಟೇ ಹೇಳಿದರು.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ