ಮಂಡ್ಯದಲ್ಲಿ ಡ್ರಗ್ಸ್ ದಂಧೆ ಇಲ್ಲ – ಎಸ್ಪಿ

Team Newsnap
1 Min Read
Drug trafficking case – 42 students of Manipal University suspended ಡ್ರಗ್ಸ್ ದಂಧೆ ಕೇಸ್ – ಮಣಿಪಾಲ ವಿವಿಯ 42 ವಿದ್ಯಾರ್ಥಿಗಳು ಅಮಾನತು

ಮಂಡ್ಯ

ಮಂಡ್ಯದಲ್ಲಿ ಗಾಂಜಾ ಮಾರಾಟ ನಡೆದಿರುವುದು ನಿಜ ಎಂದು ಜಿಲ್ಲಾ ಎಸ್‌ಪಿ ಪರಶುರಾಮ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದ ಎಸ್ಪಿ ಮಂಡ್ಯದಲ್ಲಿ ಡ್ರಗ್ಸ್ ಸಿಗುತ್ತೇ ಎಂದು ಹೇಳಿದ್ದ ಮಾಜಿ ಎಂ ಪಿ ಶಿವ ರಾಮೇಗೌಡ ಹಾಗೂ ಶಾಸಕ ಡಿ.ಸಿ.ತಮ್ಮಣ್ಣ ಆರೋಪಗಳನ್ನು ತಳ್ಳಿ ಹಾಕಿದರು.ಇದುವರೆಗೆ ಮಂಡ್ಯ ಜಿಲ್ಲೆಯಲ್ಲಿ ಡ್ರಗ್ಸ್ ಮಾರಾಟ ಕಂಡುಬಂದಿಲ್ಲ. ಆದರೆ ಗಾಂಜಾ ಮಾರಾಟ ಪ್ರಕರಣಗಳು ಸಿಕ್ಕಿವೆ. ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 43 ಗಾಂಜಾ ಪ್ರಕರಣಗಳು ಪತ್ತೆಯಾಗಿವೆ.
5 ವರ್ಷದಲ್ಲಿ 145 ಕೆಜಿ ಗಾಂಜಾವನ್ನು ಸೀಜ್ ಮಾಡಿದ್ದೇವೆ. ಇದುವರೆಗೆ 64 ಮಂದಿ ಆರೋಪಿಗಳನ್ನು ಬಂಧನ ಮಾಡಿದ್ದೇವೆ. ಜಿಲ್ಲೆಯ ನಾಗಮಂಗಲದಲ್ಲಿ ಹೆಚ್ಚು ಗಾಂಜಾ ಮಾರಾಟವಾಗುತ್ತಿತ್ತು ಎಂದರು.

ನಾಗಮಂಗಲಕ್ಕೆ ಆಂಧ್ರಪ್ರದೇಶದಿಂದ ಗಾಂಜಾ ಬರುತ್ತಾ ಇತ್ತು. ಆ ಲಿಂಕ್‌ನನ್ನು ಈಗ ಬ್ರೇಕ್ ಮಾಡಿದ್ದೇವೆ.
ಜಿಲ್ಲೆಗೆ‌ ಮೈಸೂರು, ಬಳ್ಳಾರಿ ಹಾಗೂ ಆಂಧ್ರದ ಲಿಂಕ್ ಹೆಚ್ಚಿದೆ. ಇಲ್ಲಿಂದ ಹೆಚ್ಚು ಗಾಂಜಾ ಸಪ್ಲೈ ಆಗುತ್ತಿದೆ.
ಗಾಂಜಾ ಮಾರಾಟ ಹಾಗೂ ಸೇವನೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ.

TAGGED: ,
Share This Article
Leave a comment