ರಾಡಾರ್ ಇಮೇಜಿಂಗ್ ಉಪಗ್ರಹ ಇಂದು ಬೆಳಗ್ಗೆ ಯಶಸ್ವಿ ಉಡಾವಣೆ

Team Newsnap
1 Min Read

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಬೆಳಗ್ಗೆ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ವರ್ಷದ ಮೊದಲ ‘ರಾಡಾರ್ ಇಮೇಜಿಂಗ್ ಉಪಗ್ರಹ’ ಭೂ ವೀಕ್ಷಣಾ ಉಪಗ್ರಹ (EOS-04) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 5:59ಕ್ಕೆ ಉಡಾವಣೆಯಾಗಿದೆ.

ಇದರ ಜೊತೆಗೆ ಎರಡು ಸಹ ಪ್ರಯಾಣಿಕ ಉಪಗ್ರಹವನ್ನೂ PSLV ಹೊತ್ತೊಯ್ದಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ INSPIRE sat-1, ಬೌಲ್ಡರ್‌ನ ಕೊಲೊರಾಡೋ ವಿಶ್ವವಿದ್ಯಾಲಯದ ವಾಯುಮಂಡಲ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಾಲಯದ ಸಹಯೋಗದೊಂದಿಗೆ ನಿರ್ಮಿಸಿರುವ ಉಪಗ್ರಹಗಳನ್ನು PSLV-C52 ಹೊತ್ತೊಯ್ದಿದೆ.

ಪಿಎಸ್‌ಎಲ್‌ವಿ ಮೂಲಕ ಇಸ್ರೋ, ಭೂ ವೀಕ್ಷಣಾ ಉಪಗ್ರಹ (ಇಒಎಸ್-04) ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಇದನ್ನು ರಾಡಾರ್ ಇಮೇಜಿಂಗ್ ಉಪಗ್ರಹ ಎಂದು ಕರೆಯಲಾಗುತ್ತದೆ.
ಇದು ಭೂಮಿಯ ಮೇಲ್ಮೈಯ ನಿಖರವಾದ ಚಿತ್ರವನ್ನು ಇಸ್ರೋಗೆ ಕಳುಹಿಸುತ್ತದೆ.

Share This Article
Leave a comment