ಮಹಿಳಾ ತಹಶೀಲ್ದಾರ್‌ಗೆ ಎಷ್ಟು ಮದುವೆ ಆಗಿದೆ?- RTI ಮಾಹಿತಿ ಕೇಳಿದ ಕಾರ್ಯಕರ್ತ ಜೈಲು ಪಾಲು

Team Newsnap
1 Min Read
Questioning female tahsildar ?- Activist behind bars .ಮಹಿಳಾ ತಹಶೀಲ್ದಾರ್‌ಗೆ ಎಷ್ಟು ಮದುವೆ ಆಗಿದೆ?- RTI ಮಾಹಿತಿ ಕೇಳಿದ ಕಾರ್ಯಕರ್ತ ಜೈಲು ಪಾಲು

ಮಹಿಳಾ ಅಧಿಕಾರಿಯೊಬ್ಬರ ವೈಯಕ್ತಿಕ ವಿಚಾರಗಳ ಮಾಹಿತಿ ಹಕ್ಕಲ್ಲಿ ವಿವರ ಕೇಳಿದ ಆರ್‌ಟಿಐ ಕಾರ್ಯಕರ್ತನೊಬ್ಬ ಜೈಲು ಸೇರಿದ ಘಟನೆ ಮುಳುಬಾಗಿಲಿನಲ್ಲಿ ನಡೆದಿದೆ. ಮುಳಬಾಗಿಲು ತಾಲೂಕಿನ ಮಂಡಿಕಲ್ ನಾಗರಾಜ್ ಬಂಧಿತ ಆರ್‌ಟಿಐ ಕಾರ್ಯಕರ್ತ.ಡಿ.ಕೆ. ಶಿಗೆ ಮತ್ತೊಂದು ಶಾಕ್ ನೀಡಿದ ಇಡಿ : ಅ. 7 ರಂದು ವಿಚಾರಣೆಗೆ ಬನ್ನಿ

ಈತ ಮುಳಬಾಗಿಲು ತಹಶೀಲ್ದಾರ್ ಶೋಭಿತಾರ ವೈಯಕ್ತಿಕ ವಿಚಾರಗಳ ಕುರಿತು ಆರ್‌ಟಿಐ ಅಡಿ ಮಾಹಿತಿ ಕೇಳಿದ್ದ. ಶೋಭಿತಾಗೆ ಇದುವರೆಗೂ ಎಷ್ಟು ಮದುವೆಯಾಗಿದೆ? ಯಾರೊಂದಿಗೆ ವಿಚ್ಛೇದನ ಆಗಿದೆ? ಸದ್ಯ ಯಾರ ಜೊತೆ ಸಂಸಾರ ಮಾಡುತ್ತಿದ್ದಾರೆ ಎಂಬೆಲ್ಲಾ ಮಾಹಿತಿ ಕೇಳಿದ್ದಾನೆ.


ಅಷ್ಟೇ ಅಲ್ಲದೇ ಶೋಭಿತಾ ಅವರಿಗೆ ಎಲ್ಲಿ ಮದುವೆಯಾಗಿದೆ. ಲಗ್ನ ಪತ್ರಿಕೆ, ಕಲ್ಯಾಣ ಮಂಟಪದ ವಿವರ ಕೊಡಿ. ಪತಿಯ ಜೊತೆ ವಿಚ್ಛೇದನ ಆಗಿದಿಯಾ ಇಲ್ಲವಾ? ಆಗಿದ್ದರೇ ಕಾರಣ ಕೊಡಿ ಹಾಗೂ ಅವರೆಲ್ಲಾ ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ತುರ್ತಾಗಿ ನೀಡುವಂತೆ ಆರ್‌ಟಿಐಗೆ ಸಲ್ಲಿಸಿದ್ದಾನೆ. ಇದನ್ನು ಓದಿ –ಬಾಲಿವುಡ್ ನಟಿಯರಿಗೇ ಸೆಡ್ಡು : ಸ್ಟಾರ್ ನಟನಿಗೆ ಕೊಡಗಿನ ಕುವರಿ ರಶ್ಮಿಕಾ ನಾಯಕಿ

ವೈಯಕ್ತಿಕ ವಿಚಾರ ಕೇಳಿದ್ದಕ್ಕೆ ಕಾನೂನು ರಿತ್ಯ ಕ್ರಮ ವಹಿಸಿದ ತಹಶೀಲ್ದಾರ್ , ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ಆರ್‌ಟಿಐ ಕಾರ್ಯಕರ್ತ ನಾಗರಾಜ್‍ನನ್ನು ಮುಳಬಾಗಿಲು ನಗರ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

Share This Article
Leave a comment