ಬ್ರಿಟನ್‌ ರಾಣಿ ಎಲಿಜಬೆತ್​ II ವಿಧಿವಶ

Team Newsnap
1 Min Read

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಬ್ರಿಟನ್‌ ರಾಣಿ ಎಲಿಜಬೆತ್​ II (96) ಅವರಿಗೆ ಚಿಕಿತ್ಸೆ ನೀಡಲಾಗುತಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು .

ಮಂಡ್ಯದ ಶ್ರೀನಿಧಿ ಶೆಟ್ಟಿ ಹನಿಟ್ರ್ಯಾಫ್ ಪ್ರಕರಣ’ಕ್ಕೆ ಬಿಗ್ ಟ್ವಿಸ್ಟ್: ಶೆಟ್ಟಿಯ ಮುಖವಾಡ ಬಯಲು ಮಾಡಿದ ವಿಡಿಯೋ

ರಾಣಿ ಇಂದು ಮಧ್ಯಾಹ್ನ ಬಾಲ್ಮೋರಲ್ನಲ್ಲಿ ನಿಧನರಾದರು ಎಂದು ಬಕಿಂಗ್ಹ್ಯಾಮ್ ಅರಮನೆ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದೆ. ರಾಣಿಯ ಮಗ ಮತ್ತು ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್, ಮೊಮ್ಮಕ್ಕಳಾದ ವಿಲಿಯಂ ಮತ್ತು ಹ್ಯಾರಿ ಮತ್ತು ಅವರ ಕುಟುಂಬಗಳು ಇರುವ ಸ್ಕಾಟಿಷ್ ಪರ್ವತಶ್ರೇಣಿಗಳಲ್ಲಿನ ಅವರ ಬಾಲ್ಮೊರಲ್ ಮನೆಯಲ್ಲಿ ರಾಣಿ ಎಲಿಜತ್‌ ತನ್ನ ಕೊನೆಯ ದಿನಗಳನ್ನು ಕಳೆದರು ಎನ್ನಲಾಗಿದೆ.

2015 ರಲ್ಲಿ, ರಾಣಿ ಎಲಿಜಬೆತ್ ತನ್ನ ಮುತ್ತಜ್ಜಿ ರಾಣಿ ವಿಕ್ಟೋರಿಯಾ ಅವರನ್ನು ಹಿಂದಿಕ್ಕಿ ದೀರ್ಘಕಾಲ ಸೇವೆ ಸಲ್ಲಿಸಿದ ಬ್ರಿಟಿಷ್ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವರ್ಷ, ಅವರು ವಿಶ್ವದ ಎರಡನೇ ಅತಿ ಹೆಚ್ಚು ಆಳಿದ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Share This Article
Leave a comment