ಪುಟ್ಟಣ್ಣ ಕಣಗಾಲ್ ಜನ್ಮ ದಿನವನ್ನು ನಿರ್ದೇಶಕರ ದಿನವನ್ನಾಗಿ ಆಚರಣೆ – ವಾಣಿಜ್ಯ ಮಂಡಳಿ ನಿರ್ಧಾರ

Team Newsnap
1 Min Read

ಕನ್ನಡದ ಅದ್ಬುತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜನ್ಮದಿನವನ್ನು ನಿರ್ದೇಶಕರ ದಿನ ಎಂದು ಆಚರಿಸುವುದಾಗಿ ವಾಣಿಜ್ಯ ಮಂಡಳಿ ಘೋಷಿಸಿದೆ.

ಈ ಬಗ್ಗೆ ವಾಣಿಜ್ಯ ಮಂಡಳಿ ನಿರ್ದೇಶಕ ಭಾಮ ಹರೀಶ್ ಮಾತನಾಡಿ , ಪ್ರತಿ ವರ್ಷ ಡಿಸೆಂಬರ್ 1 ಪುಟ್ಟಣ್ಣ ಕಣಗಾಲ್ ಜನ್ಮ ದಿನವನ್ನು ನಿರ್ದೇಶಕರ ದಿನವನ್ನಾಗಿ ಆಚರಣೆ ಮಾಡೋಣ ಎಂದು ಪದಾಧಿಕಾರಿಗಳೆಲ್ಲಾ ಸೇರಿ ತೀರ್ಮಾನ ಮಾಡಿದ್ದೇವೆ.

ತೆಲುಗು ಚಿತ್ರರಂಗದಲ್ಲೂ ನಿರ್ದೇಶಕರ ದಿನ ಎಂದು ಆಚರಣೆ ಮಾಡಲಾಗುತ್ತಿದೆ, ಅಂತೆಯೇ ನಮ್ಮಲ್ಲೂ ಪ್ರತಿ ವರ್ಷ ಡಿಸೆಂಬರ್ 1 ರಂದು ದಿನ ಎಂದು ಆಚರಿಸುವುದಾಗಿ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.

ಎಸ್.ಆರ್.ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗು ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು. ನಿರ್ದೇಶಕ ರಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆಯುತ್ತಿದ್ದರು. ಹಿಂದಿ, ಮಲಯಾಳಂ ಭಾಷೆಗಳ ಕೆಲವು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ.

ಇವರ ಚಿತ್ರಗಳು ಅತ್ಯಂತ ಉತ್ಕೃಷ್ಟ ಮಟ್ಟದ್ದೆಂದು ಹಲವು ಕನ್ನಡಿಗರು ಅಭಿಪ್ರಾಯ ಪಡುತ್ತಾರೆ. ಕಣಗಾಲ್ ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು,ಮೂರು ಫಿಲ್ಮ್ಫೇರ್ ಪ್ರಶಸ್ತಿಗಳು ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದರು. ರೈತರನ್ನು ಮದುವೆಯಾಗುವ ಯುವತಿಗೆ 10 ಲಕ್ಷ ರು. ಪ್ರೋತ್ಸಾಹ ಧನಕ್ಕೆ ಆಗ್ರಹ

ಸಾಮಾನ್ಯವಾಗಿ ಕಲೆ, ಭಾವನಾತ್ಮಕತೆಯಿಂದ ಕೂಡಿದ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಕಣಗಾಲ್, ಕನ್ನಡ ಸಿನಿಮಾಕ್ಕೆ ಹೊಸ ರೂಪ ತಂದವರು.ಮೈಸೂರಿನ ಯುವ ಸಾಹಿತಿ ವಿ.ಶ್ರೀಧರ ಅವರು ಪುಟ್ಟಣ್ಣಕಣಗಾಲರ ಚಲನಚಿತ್ರಗಳ ವಿಮರ್ಶೆಯನ್ನು ಕುರಿತ ಕೃತಿ ‘ಕನ್ನಡ ಚಲನಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲರ ಕೊಡುಗೆ’ ಎಂಬ ಕೃತಿಯನ್ನು ಹೊರತಂದಿರುವುದನ್ನು ಕಾಣಬಹುದು.

ಕರ್ನಾಟಕ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯವು ಚಲನಚಿತ್ರ ನಿರ್ದೇಶಕರು ಮತ್ತು ವಿವಿಧ ವ್ಯಕ್ತಿಗಳನ್ನು ಪುಟ್ಟಣ್ಣ ಕಣಗಲ್ ಪ್ರಶಸ್ತಿ ನೀಡಿ ಗೌರವಿಸುತ್ತದೆ.

Share This Article
Leave a comment