ರೈತರನ್ನು ಮದುವೆಯಾಗುವ ಯುವತಿಗೆ 10 ಲಕ್ಷ ರು. ಪ್ರೋತ್ಸಾಹ ಧನಕ್ಕೆ ಆಗ್ರಹ

Team Newsnap
1 Min Read
Dowry Harassment: Complaint by wife against IAS officer ವರದಕ್ಷಿಣೆ ಕಿರುಕುಳ : IAS ಅಧಿಕಾರಿ ವಿರುದ್ಧ ಪತ್ನಿಯಿಂದಲೇ ದೂರು

ರಾಜ್ಯದ ಗ್ರಾಮೀಣ ಭಾಗದ ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ 10 ಲಕ್ಷ ರೂ.ಪ್ರೋತ್ಸಾಹಧನ ನೀಡಬೇಕು ಎಂದು ಹಸಿರು ಪ್ರತಿಷ್ಠಾನ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಸಿರು ಪ್ರತಿಷ್ಠಾನದ ಅಧ್ಯಕ್ಷ ಕೆ.ಜಿ.ಕುಮಾರ್, ದೇಶಕ್ಕೆ ಸೈನಿಕನ ಪಾತ್ರ ಎಷ್ಟು ಮುಖ್ಯವೋ ಅದೇ ರೀತಿ ದೇಶಕ್ಕಾಗಿ ಆಹಾರ ಉತ್ಪಾದನೆ ಮಾಡುವ ಕೃಷಿಕನ ಪಾತ್ರವೂ ಮಹತ್ವವಾಗಿದೆ ಎಂದರು.ರಾಜ್ಯದಲ್ಲಿ 108 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ: ಇಬ್ಬರು IAS ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ – ಆಡಳಿತ ಯಂತ್ರಕ್ಕೆ ಸರ್ಜರಿ

ಮುಂದಿನ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ರೈತಾಪಿ ಯುವಕರನ್ನು ವಿವಾಹವಾಗುವ ಹೆಣ್ಣು ಮಕ್ಕಳಿಗೆ 10 ಲಕ್ಷ ರು ಪ್ರೋತ್ಸಾಹ ಧನ ಸೇರಿದಂತೆ ವಿಶೇಷ ಪ್ಯಾಕೇಜ್ ನೀಡುವ ಕುರಿತು ಚರ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರವು ಯೋಜನೆಯೊಂದನ್ನು ರೂಪಿಸಿ ರೈತಾಪಿ ಯುವಕರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಷರತ್ತು ಬದ್ಧವಾಗಿ 10 ಲಕ್ಷ ರೂ. ಪ್ರೋತ್ಸಾಹಧನ ಸೇರಿದ ವಿಶೇಷ ಪ್ಯಾಕೇಜ್ ನ್ನು ಸರ್ಕಾರ ಘೋಷಿಸಬೇಕು ಎಂದು ಆಗ್ರಹಿಸಿದರು.

Share This Article
Leave a comment