ರಾಜ್ಯದಲ್ಲಿ 108 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ: ಇಬ್ಬರು IAS ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ – ಆಡಳಿತ ಯಂತ್ರಕ್ಕೆ ಸರ್ಜರಿ

Team Newsnap
1 Min Read

ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸೋಮವಾರ 108 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಪೊಲೀಸ್ ಇಲಾಖೆಯು ರಾಜ್ಯ ಗುಪ್ತ ವಾರ್ತೆ, ಸಿಐಡಿ, ಕರ್ನಾಟಕ ಲೋಕಾಯುಕ್ತ ಸೇರಿದಂತೆ ವಿವಿಧ ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿದೆ.ದ್ವಿತೀಯ PUC ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಸಿಸಿಬಿ, ಕೆ ಎಸ್ ಆರ್ ಪಿ ಟಿ ಎಸ್, ಸಿಇಎನ್, ಸೈಬರ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಗಳನ್ನು ಎತ್ತಂಗಡಿ ಮಾಡಿ ಆದೇಶಿಸಿದ್ದಾರೆ.

ಇಬ್ಬರು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆ:

ಬೆಂಗಳೂರು ನಗರದಲ್ಲಿ ನಡೆದಿರುವ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಸಂಬಂಧ ಕೆಲ ಅಧಿಕಾರಿಗಳನ್ನು ಚುನಾವಣಾ ಆಯೋಗವು ಅಮಾನತುಗೊಳಿಸಿದೆ. ಈ ಬೆನ್ನಲ್ಲೇ, ರಾಜ್ಯ ಸರ್ಕಾರದಿಂದ ಇಬ್ಬರು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿದೆ.

ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆಯ ಸ್ಪೆಷಲ್ ಕಮೀಷನರ್ ಆಗಿದ್ದಂತ ಐಎಎಸ್ ಅಧಿಕಾರಿ ಡಾ. ಹರೀಶ್ ಕುಮಾರ್ ಕೆ ಅವರಿಗೆ ಬಿಬಿಎಂಪಿಯ ಸ್ಪೆಷಲ್ ಕಮೀಷನರ್ ( ಆಡಳಿತಾಧಿಕಾರಿ) ಆಗಿ ಹೆಚ್ಚುವರಿ ಹೊಣೆಗಾರಿಕೆ ನೀಡಿದೆ.

ಇನ್ನೂ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಸಿಇಓ ಆಗಿದ್ದಂತ ಸಂಗಪ್ಪ ಅವರಿಗೆ, ಬೆಂಗಳೂರು ನಗರ ಜಿಲ್ಲಾಧಿಕಾರಿಯ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಿ ಆದೇಶಿಸಿದೆ.

108 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಪಟ್ಟಿ:

WhatsApp Image 2022 11 28 at 8.34.19 PM 1
WhatsApp Image 2022 11 28 at 8.36.05 PM
WhatsApp Image 2022 11 28 at 8.36.06 PM
WhatsApp Image 2022 11 28 at 8.36.06 PM 1
WhatsApp Image 2022 11 28 at 8.36.06 PM 2
WhatsApp Image 2022 11 28 at 8.36.07 PM

Share This Article
Leave a comment